ಬೆಂಗಳೂರು : ರಾಜ್ಯದಲ್ಲಿ ಡೀಸೆಲ್ ದರ ಏರಿಕೆ ವಿರೋಧಿಸಿ ರಾಜ್ಯ ಲಾರಿ ಮಾಲೀಕರ ಸಂಘ ಬಂದ್ಗೆ ಕರೆಕೊಟ್ಟಿದ್ದು. ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಗೂಡ್ಸ್ ವಾಹನ ಸಂಚಾರ ಬಂದ್ ಆಗಲಿದೆ. ಸರ್ಕಾರದ ಮುಂದೆ ಲಾರಿ ಮಾಲೀಕರ ಸಂಘ ವಿವಿಧ ಬೇಡಿಕೆಗಳನ್ನು ಇಟ್ಟಿದ್ದು. ಅವುಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟವದಿವರೆಗೆ ಮುಷ್ಕರ ನಡೆಯಲಿದೆ.
ಇಂದು ಸಂಜೆಯವರೆಗೆ ಸರ್ಕಾರಕ್ಕೆ ಸಮಯ ಕೊಟ್ಟಿರುವ ರಾಜ್ಯ ಲಾರಿ ಮಾಲೀಕರ ಸಂಘ. ಡಿಸೇಲ್ ದರ ಕಡಿಮೆ ಮಾಡುವವರಗೆ ಮುಷ್ಕರ ವಾಪಾಸು ಪಡೆಯಲ್ಲ ಎಂದು ಹಠ ಹಿಡಿದಿದೆ. ಹಾಲಿನ ವಾಹನ ಬಿಟ್ಟ ರಾಜ್ಯದಲ್ಲಿ ಎಲ್ಲಾ ಮಾದರಿಯ ಗೂಡ್ಸ್ ವಾಹನಗಳು ಸ್ಥಬ್ದವಾಗಲಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಡಿಸೇಲ್ ಮೇಲೆ 5 ರುಪಾಯಿ 50 ಪೈಸೆ ಹೆಚ್ಚಳ ಮಾಡಿದ್ದು. ಇಂದು ರಾತ್ರಿಯಿಂದಲೇ ಮುಷ್ಕರ ಶುರುವಾಗಲಿದೆ.
ಇದನ್ನೂ ಓದಿ :ಕೈತುತ್ತು ಕೊಟ್ಟು ಬೆಳೆಸಿದ ಮಗಳ ಚಿತೆಗೆ ಅಗ್ನಿ ಸ್ಪರ್ಷ ಮಾಡಿದ ತಂದೆ
ರಾಜ್ಯದಲ್ಲಿರುವ 6 ಲಕ್ಷ ಲಾರೀ ಮಾಲೀಕರು ತಮ್ಮ ಲಾರಿಗಳನ್ನು ರಸ್ತೆಗಿಳಿಸದಂತೆ ನಿರ್ಧರಿಸಿದ್ದು.
ಪೆಟ್ರೋಲಿಯಂ ಅಸೋಸಿಯೇಷನ್, ಗ್ಯಾಸ್ ವಾಹನಗಳು, ಆಸಿಡ್ ವಾಹನಗಳು, ಅಕ್ಕಿ, ತರಕಾರಿ ಸೇರಿದಂತೆ
ಎಲ್ಲಾ ಮಾದರಿಯ ವಾಹನಗಳು ಸಂಚಾರ ಮಾಡೋದಿಲ್ಲ ಎಂದು ತಿಳಿದು ಬಂದಿದೆ.
ಲಾರಿ ಮುಷ್ಕರಕ್ಕೆ ಕಾರಣಗಳೇನು.?
1. ಡಿಸೇಲ್ ದರ ಹೆಚ್ಚಳ ಕಡಿಮೆ ಮಾಡಬೇಕು
2. ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು.
3. ಆರ್ಟಿಓ ಬಾರ್ಡರ್ ಚೆಕ್ ಪೋಸ್ಟ್ ತೆಗೆದು ಹಾಕಬೇಕು
4. FC ಫಿಟ್ನೆಸ್ ಶುಲ್ಕ ಹೆಚ್ಚಿಸಿರುವುದನ್ನು ವಾಪಸ್ಸು ಪಡೆಯಬೇಕು
5. ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ ಆದೇಶವನ್ನು ವಾಪಸ್ಸು ಪಡೆಯಬೇಕು
6. ಚಾಲಕರ ಮೇಲೆ ಹಲ್ಲೆ ನಿಲ್ಲಬೇಕು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಹೇಳಿಕೆ
ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಖಪ್ಪ ಈ ಕುರಿತು ಹೇಳಿಕೆ ನೀಡಿದ್ದು. “ಇಂದು ರಾತ್ರಿಯಿಂದಲೇ ಲಾರಿ ಓಡಾಟ ಬಂದ್ ಆಗಲಿವೆ. ಕಳೆದ ಏಳು ವರ್ಷಗಳಿಂದ ನಾವು ಯಾವುದೇ ಮುಷ್ಕರ ಮಾಡಿಲ್ಲ. ಆದರೆ ಈಗ ಅನಿವಾರ್ಯ ಪರಿಸ್ಥಿತಿಯಿಂದಾಗಿ ಮುಷ್ಕರ ಮಾಡಬೇಕಿದೆ. ಡಿಸೇಲ್ ಬೆಲೆ ಐದಾರು ತಿಂಗಳಲ್ಲಿ 5 ರೂಪಾಯಿ ಏರಿಕೆ ಮಾಡಿದ್ದಾರೆ. ಇದೇ ರೀತಿ ಹಲವು ಬೇಡಿಕೆ ಇಟ್ಟು ಮುಷ್ಕರ ಮಾಡುತ್ತಿದ್ದೇವೆ.
ಇದನ್ನೂ ಓದಿ :ಜನರಿಂದ ಜಮೀನು ಕಿತ್ತುಕೊಳ್ಳಲ್ಲ, ಯಾರು ಆತಂಕ ಪಡಬೇಡಿ; ಪ್ರಮೋದ ದೇವಿ
ಕಾಂಗ್ರೆಸ್ ಸರ್ಕಾರ ಇದ್ದಾಗ ನಾವು ಯಾವತ್ತೂ ಮುಷ್ಕರ ಮಾಡಿಲ್ಲ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಮುಷ್ಕರ ಮಾಡುತ್ತಿದ್ದೇವೆ. ಸಂಘಟನೆಗಳು ನಮ್ಮ ಬೆಂಬಲ ಇದೆ, ಇಲ್ಲ ಅಂತೆಲ್ಲಾ ಹೇಳ್ತಿದ್ದಾರೆ. ಅದೆಲ್ಲಾ ಅವರಿಗೆ ಬಿಟ್ಟಿದ್ದು, ಅವರು ಬೆಂಬಲ ಕೊಟ್ಟರೂ ಇಲ್ಲದಿದ್ದರೂ ಲಾರಿ ಓಡಾಡಲ್ಲ. ನಮ್ಮ ಚಾಲಕರು, ಸಿಬ್ಬಂದಿಗಳು ಹಿತ ಕಾಯುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಲಾರಿ ಮಾಲಿಕರಿಗೆ ಆಗ್ತಿರುವ ಫೈನಾನ್ಸ್ ಕಿರುಕುಳ ಅಷ್ಟಿಷ್ಟಲ್ಲ. ಹೀಗಾಗಿ ಇಂದು ರಾತ್ರಿಯಿಂದಲೇ ಲಾರಿ ಮಾಲಿಕರು ಬಂದ್ ಮಾಡ್ತಾರೆ
ನಾವು ಲಾರಿ ಮಾಲಕರ ಹಿತಕ್ಕಾಗಿ ಬಂದ್ ಮಾಡ್ತಿದ್ದೇವೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳಿದರು