ಮಂಡ್ಯ : ಸಚಿವ ಚೆಲುವರಾಯಸ್ವಾಮಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದು. ಕುಮಾರಸ್ವಾಮಿ ಆಣೆ ಪ್ರಮಾಣ ಮಾಡಲು ನನ್ನ ಜೊತೆಯೇ ಬರಬೇಕೆಂದು ನಾನು ಹೇಳಿಲ್ಲ. ಧರ್ಮಸ್ಥಳದ ಮಂಜುನಾಥನ ಹೆಸರು ಹೇಳಿ ಏನು ಹೇಳಬೇಕೋ ಅದನ್ನ ಹೇಳಲಿ ಎಂದು ಹೇಳಿದರು,
ಮಂಡ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ “ಕುಮಾರಸ್ವಾಮಿ ಅವರು ಹಿಟ್ ಆಂಡ್ ರನ್ ರೀತಿ. ಅವರು ಮಾಜಿ ಸಿಎಂ ಈಗ ಕೇಂದ್ರ ಸಚಿವರು ಅದಕ್ಕೆ ಗೌರವಯುತವಾಗಿ ನಡೆದುಕೊಳ್ಳಬೇಕೂ. ನಾವೇಲ್ಲ ಕುಮಾರಸ್ವಾಮಿಯನ್ನ ಅಡ್ಡದಾರಿಗೆ ಎಳೆದೆವು ಎಂದು ದೇವೇಗೌಡರು ಹೇಳುತ್ತಾರೆ. ಆದರೆ ಕುಮಾರಸ್ವಾಮಿಯವರು ಈ ರೀತಿ ಹೇಳ್ತಾರೆ. ಕುಮಾರಸ್ವಾಮಿಯವರಿಗೆ ಅಧಿಕಾರ ಅನುಭವಿಸುವಾಗ ಎಲ್ಲಾ ಚೆನ್ನಾಗಿತ್ತು. ಆದರೆ ಈಗ ಚೆನ್ನಾಗಿಲ್ಲ.
ಇದನ್ನೂ ಓದಿ :ಮನೆಯಲ್ಲಿ ಪ್ರೀತಿಗೆ ವಿರೋಧ; ಅಂಬೇಡ್ಕರ್ ಪ್ರತಿಮೆ ಎದುರು ನವಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
ಕುಮಾರಸ್ವಾಮಿ ಸಿಎಂ ಆಗಲು ನಮ್ಮ ಮುಂದೆ ಕೈಕಟ್ಟಿ ಕುಳಿತಿದ್ದರು. ನಾವು ನಮನ್ನು ಸಚಿವರಾಗಿ ಮಾಡಿ ಎಂದು ಕೇಳಿದ್ದು ನಮ್ಮ ಹಕ್ಕು. ನಮಗೆ ಅರ್ಹತೆ ಇತ್ತು, ಅದಕ್ಕೆ ಸಚಿವ ಸ್ಥಾನ ಕೊಟ್ಟಿದ್ರು. ದೇವೇಗೌಡರು, ಸಿದ್ದರಾಮಯ್ಯ, ಎಂಪಿ ಪ್ರಕಾಶ್, ಸಿಂಧ್ಯಾ ಎಲ್ಲರೂ ಸೇರಿ ಮಂತ್ರಿ ಮಾಡಿದ್ರು. ಕುಮಾರಸ್ವಾಮಿಯನ್ನ ಸಿಎಂ ಮಾಡುವಾಗ ದೇವೇಗೌಡರು, ರೇವಣ್ಣ, ಸಿದ್ದರಾಮಯ್ಯ, ಬಚ್ಚೇಗೌಡ ಯಾರು ಇರಲಿಲ್ಲ. ಆಗ ಕುಮಾರಸ್ವಾಮಿ ಜೊತೆ ಇದ್ದಿದ್ದು ಚಲುವರಾಯಸ್ವಾಮಿ ಸ್ನೇಹಿತರೆ. ನನ್ನ ಮಂತ್ರಿ ಮಾಡಲು 10 ಜನ ಇದ್ದರು. ಇವನನ್ನಾ ಸಿಎಂ ಮಾಡಲು ನಾನು ನನ್ನ ಸ್ನೇಹಿತರೇ ಇದ್ದಿದ್ದು.
ಇದನ್ನೂ ಓದಿ :SRH ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಕುಮಾರಸ್ವಾಮಿ ಅವರಷ್ಟು ಮನೆಗಳನ್ನು ಯಾರು ಹಾಳು ಮಾಡಿಲ್ಲ. ಸದನದಲ್ಲಿ ಅವರು ತಪ್ಪು ಒಪ್ಪಿಕೊಂಡ್ರೆ ತಪ್ಪು ಒಪ್ಪಿಗೆನಾ. ತಪ್ಪು ಎಲ್ಲಿ ಒಪ್ಪಿಕೊಂಡ್ರು ತಪ್ಪೆ. ನನ್ನ ಕುಮಾರಸ್ವಾಮಿ ಕೆರಳಿಸೋಕೆ ಆಗಲ್ಲ. ನಾನು ಪ್ರಾಮಾಣಿಕವಾಗಿ ಇದ್ದೇನೆ, ನನ್ನಿಂದ ಕುಮಾರಸ್ವಾಮಿಗೆ ಸಹಾಯವಾಗಿದೆ. ನನ್ನಿಂದ ಕುಮಾರಸ್ವಾಮಿಗೆ ಅನ್ಯಾಯವಾಗಿದೆ. ದೇವರು ಕುಮಾರಸ್ವಾಮಿ ಅವರನ್ನಾ ಚನ್ನಾಗಿ ಆರೋಗ್ಯವಾಗಿ ಇಟ್ಟಿರಲಿ. ಅವರ ರೀತಿ ನಾವು ಕೆಟ್ಟದನ್ನು ಬಯಸಲ್ಲಾ. ಸದನದಲ್ಲಿ ನಾನು ಸಿಎಂ ಆಗಲು ಚಲುವರಾಯಸ್ವಾಮಿ ಅವರ ಸ್ನೇಹಿತರು ಕಾರಣ ಎಂದು ಹೇಳಿದ್ದಾರೆ ಎಂದು ಹೇಳಿದರು,