Tuesday, September 9, 2025
HomeUncategorizedನನ್ನನ್ನು ಮುಗಿಸಲು ಬಂದ್ರೆ ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ: ಯತ್ನಾಳ್​

ನನ್ನನ್ನು ಮುಗಿಸಲು ಬಂದ್ರೆ ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ: ಯತ್ನಾಳ್​

ವಿಜಯಪುರ : ಶಾಸಕ ಯತ್ನಾಳ್​ ಹತ್ಯೆ ಸಂಚಿನ ಕುರಿತು ಮೊದಲ ಬಾರಿಗೆ ಶಾಸಕ ಬಸನಗೌಡ ಪಾಟೀಲ್​  ಯತ್ನಾಳ್ ಮಾಧ್ಯಮದೊಂದಿಗೆ ಮಾತನಾಡಿದ್ದು. ನನ್ನನ್ನು ಮುಗಿಸಲು ಆಗಲ್ಲ. ಯತ್ನಾಳ್​ನನ್ನು ಮುಗಿಸಲು ಬಂದರೆ ಇಡೀ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಹೇಳಿದರು.

ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಮಹಮ್ಮದ್​ ಪೈಗಂಬರ್​ಗೆ ಯತ್ನಳ್​ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕೆಲ ಕಿಡಿಗೇಡಿಗಳು ಯತ್ನಾಳ್​ರ ತಲೆ ಕತ್ತರಿಸಬೇಕು ಎಂಬ ಆಡಿಯೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದವು. ಇದು ರಾಜ್ಯದಲ್ಲಿ ಕೋಲಾಹಲವನ್ನು ಎಬ್ಬಿಸಿತ್ತು. ಇದರ ಕುರಿತು ಮೊದಲ ಬಾರಿಗೆ ಶಾಸಕ ಯತ್ನಳ್​ ಪ್ರತಿಕ್ರಿಯೆ ನೀಡಿದ್ದು. ‘ ಯತ್ನಾಳ್​ನನ್ನು ಮುಗಿಸಲು ಆಗಲ್ಲ, ನನ್ನನ್ನು ಮುಗಿಸಲು ಬಂದರೆ ರಾಜ್ಯದಲ್ಲಿ ಬೆಂಕಿ ಹೊತ್ತಕೊಳ್ಳುತ್ತೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು. ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರಬರುತ್ತದೆ. ಈ ಪ್ರಕರಣದ ತನಿಖೆಯನ್ನು ಎನ್​ಐಎ ಮಾಡಬೇಕು. ನಮ್ಮಲ್ಲಿ ರಾಯಣ್ಣನ ರಕ್ತ ಹರಿಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ :ಕೊಲೆಘಾತುಕನ ಎನ್​​ಕೌಂಟರ್​ ಮಾಡಿ ದೇಶದ ಜನರ ಮನಗೆದ್ದ PSI ಅನ್ನಪೂರ್ಣ

ಪ್ರವಾದಿ​ ಪೈಗಂಬರ್​ಗೆ ಬೈದಿಲ್ಲ..!

ವಿಜಯಪುರದಲ್ಲಿ ಶಾಸಕ ಯತ್ನಾಳ್​ ಈ ಕುರಿತು ಸ್ಪಷ್ಟನೆ ನೀಡಿದ್ದು. ‘ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಮಾತನಾಡ್ತಿದ್ದೆ. ಮಾತಿನ ವೇಗದಲ್ಲಿ ಮಹಮ್ಮದ್ ಅಲಿ ಜಿನ್ನಾ ಎನ್ನಲು ಹೋಗಿ ತಪ್ಪಾಗಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತೆ ಆಗುತ್ತೆ.

ಇದನ್ನೂ ಓದಿ :ಹಿರಿಯ ನಟ ಬ್ಯಾಂಕ್​ ಜನಾರ್ಧನ್​ ನಿಧನ; ತಂದೆಯ ಬಗ್ಗೆ ಮಗ ಹೇಳಿದ್ದೇನು

ವಿಜಯಪುರದಲ್ಲಿ ಕಾಂಗ್ರೆಸ್​ನವರು ಬಿಟ್ಟರೇ ಈ ಕುರಿತು ಬೇರೆಯವರು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ಹತಾಶೆಯಾಗಿದ್ದಾರೆ, ಅವರಿಗೆ ಒಂದು ವಿಷಯ ಬೇಕಿತ್ತು. ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡೋದನ್ನ ಕಲಿಸಿಲ್ಲ. ರಾಮ, ಕೃಷ್ಣ, ಲಕ್ಷ್ಮೀ, ಸರಸ್ವತಿ ಅವಹೇಳನ ಮಾಡಿದಾಗ ಹೀಗೆ ಆಗಬೇಕಲ್ವಾ. ಇದೊಂದು ಸಂಚು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments