Wednesday, April 16, 2025

ಬ್ರೇಕ್​ಫೇಲ್​ ಆಗಿ ಡಿವೈಡರ್​ಗೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್​

ಬೆಂಗಳೂರು : ಬಿಎಂಟಿಸಿ ಎಲೆಕ್ಟ್ರಿಕಲ್​ ಬಸ್​​ ಬ್ರೇಕ್​ಫೇಲ್​ ಆಗಿ ಡಿವೈಡರ್​ಗೆ ಡಿಕ್ಕಿಯಾಗಿರುವ ಘಟನೆ ಬೆಂಗಳೂರಿನ ಸುಮನಹಳ್ಳಿ ಬಳಿ ನಡೆದಿದ್ದು. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಗೊರಗುಂಟೆಪಾಳ್ಯ ಮಾರ್ಗದಿಂದ ಬನಶಂಕರಿ ಕಡೆಗೆ ಚಲಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕಲ್​ ಬಸ್ ಬ್ರೇಕ್​ ಫೇಲ್​ ಆಗಿ ಡಿವೈಡರ್​ಗೆ ಡಿಕ್ಕಿಯಾಗಿದೆ. ಫ್ಲೈಓವರ್​ ಮೇಲೆ ಬಸ್​ ಬ್ರೇಕ್​ ಏಕಾಏಕಿ ಫೇಲ್​ ಆಗಿದ್ದು. ಚಾಲಕನ ಸಮಯ ಪ್ರಜ್ಞೆಯಿಂದ ಬಸ್​ನನ್ನು ಬಲ ಬದಿಯ ಡಿವೈಡರ್​ಗೆ ಗುದ್ದಿ ನಿಲ್ಲಿಸಿದ್ದಾನೆ. ಇದರಿಂದ ಭಾರೀ ಅನುಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.

ಇದನ್ನೂ ಓದಿ :ಹಿಂದೂ ಹುಲಿ ಯತ್ನಾಳ್​ಗೆ ಜೀವ ಬೆದರಿಕೆ: ರೇಣುಕಚಾರ್ಯ ಖಡಕ್​ ಪ್ರತಿಕ್ರಿಯೆ

ಅಪಘಾತದಲ್ಲಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದ್ದ. ಬಸ್​ನ ಮುಂಭಾಗ ನಜ್ಜುಗುಜ್ಜಾಗಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES