ಶಿವಮೊಗ್ಗ : ಗಿಡಮೂಲಿಕೆ ಮಾರಾಟಕ್ಕಾಗಿ ಆಫ್ರಿಕಾಗೆ ತೆರಳಿದ್ದ ಹಕ್ಕಿಪಿಕ್ಕಿ ಕಾಲೋನಿಯ 41 ವರ್ಷದ ಶಮೀಲಾ ಎಂಬ ಮಹಿಳೆ ಮಲೇರಿಯಾ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಕುಟುಂಬದವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶಿವಮೊಗ್ಗ ತಾಲೂಕು ಮಲ್ಲಿಗೇನಹಳ್ಳಿ ಬಳಿಯ ತುಂಗಾ ಚಾನಲ್ ಪಕ್ಕದ ಹಕ್ಕಿಪಕ್ಕಿ ಕಾಲೋನಿಯ ಶಿಖರಮಣಿ ಎಂಬುವವರ ಪುತ್ರಿ ಶಮೀಲಾ, ಆಫ್ರಿಕಾ ಖಂಡದ ಗಿನಿ ದೇಶದಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಗಿನಿಯ ಝೆರೆಕೊರೆ ನಗರದ ಆಸ್ಪತ್ರೆಗೆ ಏಪ್ರಿಲ್ 8ರಂದು ಶಮೀಲಾ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಅಲ್ಲಿಯೇ ಮೃತಪಟ್ಟಿದ್ದಾರೆ. ಚಿಕಿತ್ಸೆಯ ಬಿಲ್ 3 ಲಕ್ಷ ರೂ. ಪಾವತಿಸದೆ ಮೃತದೇಹ ಕೊಡುವುದಿಲ್ಲ ಎಂದು ಆಸ್ಪತ್ರೆಯವರು ಪಟ್ಟುಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ಅನೈತಿಕ ಸಂಬಂಧದ ಆರೋಪ; ತಾಲಿಬಾನ್ ರೀತಿ ಮಹಿಳೆಗೆ ಥಳಿಸಿದ ದುಷ್ಕರ್ಮಿಗಳು
ಹಣ ಪಾವತಿಸಲಾಗದೆ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರವಿಗೆ ಧಾವಿಸುವಂತೆ ಗಿನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮೊರೆ ಇಟ್ಟಿದ್ದಾರೆ. ಮಹಿಲೆ ತಿಂಗಳ ಹಿಂದಷ್ಟೆ ಗಿಸಿ ದೇಶಕ್ಕೆ ತೆರೆಳಿದ್ದರು. ಇವರ ಸಂಬಂಧಿ ಆಕಾಶ್ ಎಂಬಾತನೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದನು.
ಇದೀಗ ಆತನ ಶಮೀಲಾ ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ರಾಯಭಾರ ಕಚೇರಿ ಅಧಿಕಾರಿಗಳು ಹಾಗೂ ಸಚಿವರಿಗೆ ಮನವಿ ಮಾಡಿದ್ದು, ಶಮೀಲಾ ಜೊತೆಗೆ ಆಫ್ರಿಕಾಗೆ ತೆರಳಿದ್ದ ಸಂಬಂಧಿ ಆಕಾಶ್ ಆಕೆಯ ಮೃತದೇಹದ ವಿಡಿಯೋ ಮತ್ತು ಮಾಹಿತಿಯನ್ನು ಕುಟುಂಬದವರಿಗೆ ರವಾನಿಸಿದ್ದಾರೆ. ಸದ್ಯ, ಕುಟುಂಬದವರು ಸರ್ಕಾರದ ನಿರ್ಧಾರದತ್ತ ಚಿತ್ತ ನೆಟ್ಟಿದ್ದಾರೆ.