Tuesday, April 15, 2025

ಹೆಂಡತಿ ಕಿರುಕುಳ: ರಾಜಭವನದ ಎದುರು ಟೆಕ್ಕಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು : ಹೆಂಡತಿ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೋರ್ವ ರಾಜಭವನದ ಬಳಿ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ತಮಿಳುನಾಡು ಮೂಲದ ಟೆಕ್ಕಿ ಜುಹೈದ್ ಅಹ್ಮದ್​ ಎಂದು ಗುರುತಿಸಲಾಗಿದೆ.

ರಾಜ್ಯಪಾಲರ ನಿವಾಸ ರಾಜಭನದ ಬಳಿ ಹೈಡ್ರಾಮವೇ ಸೃಷ್ಟಿಯಾಗಿದ್ದು. ವ್ಯಕ್ತಿಯೋರ್ವ ತನ್ನ ಪತ್ನಿ ಕಿರುಕುಳ ಕೊಡುತ್ತಿದ್ದಾಳೆ ಎಂದು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಡೆತ್​ ನೋಟ್​ ಬರೆದಿರುವ ಜುಹೈದ್,​ ಪತ್ನಿ ಜವೇರಿಯಾ ಮುಸ್ಕಾನ್ ವಿರುದ್ದ ಕಿರುಕುಳದ ಆರೋಪ ಮಾಡಿದ್ದಾನೆ.

ಇದನ್ನೂ ಓದಿ :ಆಧುನಿಕ ವಿಜ್ಞಾನಕ್ಕೂ ಸವಾಲಾಗಿ ನಿಂತಿದೆ ಈ ಬಂಡೆ; ಇದರ ಹಿಂದಿದೆ ಶ್ರೀ ಕೃಷ್ಣನ ಪವಾಡ

ಆತ್ಮಹತ್ಯೆಗೆ ಕಾರಣವೇನು..!

ಮೂಲತಃ ಚಿಕ್ಕಬಳ್ಳಾಪುರ ಜವೇರಿಯಾ ಮುಸ್ಕಾನ್​ ತನ್ನ ಪತಿಗೆ ಪದೇ ಪದೇ ವಿಚ್ಚೇದನ ಕೊಡುವುದಾಗಿ ಹೆದರಿಸುತ್ತಿದ್ದಳು ಎನ್ನಲಾಗಿದ್ದು. ಪತಿ ಜುಹೈದ್​ ಸಿಗರೇಟ್ ಸೇದುತ್ತಾನೆ ಎಂಬ ಕಾರಣವಿಟ್ಟುಕೊಂಡು ವಿಚ್ಚೇದನ ನೀಡುವುದಾಗಿ ಬೆದರಿಸುತ್ತಿದ್ದಳು. ಸುಳ್ಳು ಕೇಸ್​ ಹಾಕಿಸಿ ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂದು ತಿಳಿದು ಬಂದಿದೆ.

ಜೊತೆಗೆ ಪತಿ ಜುಹೈದ್​ ಮತ್ತು ಆತನ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿಸಿದ್ದಾಳೆ ಎಂದು ಜುಹೈದ್​ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದು. ಚಿಕ್ಕಬಳ್ಳಾಪುರದ‌ ಸ್ಥಳೀಯ ಕಾಂಗ್ರೆಸ್ ಲೀಡರ್​ಗಳಿಂದ ಏಪ್ರಿಲ್ 11 ಕೊಲೆ ಬೆದರಿಕೆಗೆ ಹಾಕಿಸಿಲಾಗಿದೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES