ಬೆಂಗಳೂರು : ಕೇಂದ್ರ ಸಚಿವ ವಿ. ಸೋಮಣ್ಣ ಜಾತಿಗಣತಿ ವರದಿ ಕುರಿತು ಹೇಳಿಕೆ ನೀಡಿದ್ದು. ಕಾಂತರಾಜ್ ಸಮಿತಿ ವರದಿ ಮಾಡಿ 10 ವರ್ಷ ಆಗಿದೆ. ಸಿಎಂ ಖುರ್ಚಿ ಉಳಿಸಿಕೊಳ್ಳಲು ಈಗ ವರದಿಯನ್ನು ಜಾರಿ ಮಾಡ್ತಿದ್ದಾರೆ. ದೆಹಲಿ ನಾಯಕರು ಅವರನ್ನು ಕರೆಸಿ ಮಾತನಾಡಿದ್ದಾರೆ. ಅವರ ಪರಿಸ್ಥಿತಿ ನೋಡಿ ನನಗೆ ನೋವಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜಾತಿಗಣತಿ ವರದಿ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಕುರಿತು ಸಚಿವ ಸೋಮಣ್ಣ ಹೇಳಿಕೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಸೋಮಣ್ಣ” ಲಿಂಗಾಯತ ಸಮುದಾಯದಕ್ಕೆ 8% ಮೀಸಲಾತಿ ಕೊಡಬೇಕು ಎಂಬ ಚರ್ಚೆಯಾಗಿತ್ತಿದೆ. ಆದರೆ ಲಿಂಗಾಯತರಿಗೆ ಮೀಸಲಾತಿ ಕೊಡಲು ಇವರ್ಯಾರು. ಆ ಜನಸಂಖ್ಯೆ ಇದ್ದರೆ, ಆ ಜನಸಂಖ್ಯೆ ಅನುಗುಣವಾಗಿ ಆಗಲಿದೆ. ವರದಿ ಪಾರದರ್ಶಕವಾಗಿ ಇಲ್ಲ. ಸಾಮಾನ್ಯ ವರ್ಗದ ಜನರು ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ಎಲ್ಲಾ ವರ್ಗದವರಿಗೆ ಸಮಾನವಾಗಿ ನ್ಯಾಯ ಕೊಡಬೇಕು ಎಂಬ ಭಾವನೆ ಇದ್ದರೆ ಈ ವರದಿ ರದ್ದು ಮಾಡಿ ಹೊಸ ವರದಿ ತಯಾರಿಸಿ ಎಂದು ಸೋಮಣ್ಣ ಆಗ್ರಹಿಸಿದರು.
ಇದನ್ನೂ ಓದಿ :ಲಿಂಗಾಯತ ಸಮಾಜದ ಜನಸಂಖ್ಯೆ ಒಂದು ಕೋಟಿಗೂ ಅಧಿಕ : ಎಂ.ಬಿ ಪಾಟೀಲ್
ಭಾಗ್ಯಗಳನ್ನು ಕೊಟ್ಟು ಬಡವರ ಮನೆ ಹಾಳ್ ಮಾಡ್ತಿದ್ದಾರೆ..!
ಇದೇ ಏಪ್ರಿಲ್ 17ರಂದು ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಕೈಗೊಂಡಿದ್ದು. ಈ ಕುರಿತು ಸೋಮಣ್ಣ ವಾಗ್ದಾಳಿ ನಡೆಸಿದ್ದು. ‘ಕಾಂಗ್ರೆಸ್ ಗೆ ನಾಚಿಕೆ ಆಗಬೇಕು, ಇಷ್ಟೊಂದು ಗೊಂದಲ ಎಲ್ಲಾದರೂ ಇದೆಯಾ..?
ಭಾಗ್ಯಗಳು ಕೊಟ್ಟು ಬಡವರ ಮನೆ ನೆಮ್ಮದಿ ಹಾಳ್ ಮಾಡ್ತಿದ್ದಾರೆ. ಇಷ್ಟೆಲ್ಲಾ ಮಾಡಿದ್ರು ನಿಮ್ಮದಾಹ ಮಾತ್ರ ಕಡಿಮೆ ಹಾಗಿಲ್ಲ. ಕಸ ತೆಗೆಯೋದಕ್ಕೂ ಟ್ಯಾಕ್ಸ್ ಹಾಕಿದ್ದೀರ. ಗುಂಪುಗಾರಿಕೆ ಮಾಡಿ ರಾಜ್ಯದ ಜನರ ನೆಮ್ಮದಿ ಹಾಳ್ ಮಾಡ್ತಿದ್ದೀರ ಎಂದು ಸೋಮಣ್ಣ ವಾಗ್ದಾಳಿ ನಡೆಸಿದರು.