Monday, April 14, 2025

ಲಿಂಗಾಯತ ಸಮಾಜದ ಜನಸಂಖ್ಯೆ ಒಂದು ಕೋಟಿಗೂ ಅಧಿಕ : ಎಂ.ಬಿ ಪಾಟೀಲ್​

ವಿಜಯಪುರ : ರಾಜ್ಯದಲ್ಲಿ ಜಾತಿಗಣತಿ ವರದಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು. ಲಿಂಗಾಯತರ ಸಂಖ್ಯೆ ಕಡಿಮೆಯಾಗಿದ್ದರ ಕುರಿತು ಸಚಿವ ಎಂ,ಬಿ ಪಾಟೀಲ್​ ಹೇಳಿಕೆ ನೀಡಿದ್ದಾರೆ. ಹಿಂದೂ ಸಾದರ, ಹಿಂದೂ ಗಾಣಿಗ, ಹಿಂದೂ ಬಣಜಿಗೆ ಉಪಜಾತಿಗಳನ್ನು 2ಎ ಮೀಸಲಾತಿಗೆ ಸೇರಿಸಿದ್ದು. ಇವೆಲ್ಲ ಸಮುದಾಯಗಳನ್ನು ಒಳಗೊಂಡರೆ ಲಿಂಗಾಯತ ಸಮಾಜದ ಜನಸಂಖ್ಯೆ ಒಂದು ಕೋಟಿಗೆ ಅಧಿಕ ಆಗುತ್ತದೆ ಎಂದು ಹೇಳಿದರು.

ಜಾತಿಗಣತಿ ವರದಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು. ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ. ಇದರ ನಡುವೆ ಎಂ.ಬಿ ಪಾಟೀಲ್​ ಹೇಳಿಕೆ ನೀಡಿದ್ದು.  ಹಿಂದೂ ಸಾದರ, ಹಿಂದೂ ಗಾಣಿಗ, ಹಿಂದೂ ಬಣಜಿಗೆ ಸಮುದಾಯಗಳನ್ನು 2ಎ ಮೀಸಲಾತಿಗಾಗಿ ಎಂದು ನಮೂದು ಮಾಡಲಾಗಿದೆ. ಇವೆಲ್ಲಾ ಸಮುದಾಯಗಳು ಒಳಗೊಂಡರೆ ಲಿಂಗಾಯತ ಸಮಾಜ ಸಂಖ್ಯೆ 1 ಕೋಟಿಗೂ ಅಧಿಕವಾಗುತ್ತದೆ. ಇದನ್ನೂ ಓದಿ :ವಕೀಲೆ ಜೀವ ಆತ್ಮಹತ್ಯೆ ಪ್ರಕರಣ; ಚಾರ್ಜಶೀಟ್​ನಲ್ಲಿ ಸ್ಪೋಟಕ ಸತ್ಯ ಬಯಲು

ಇದು ಹಿಂದೂ ಗಾಣಿಗ, ಹಿಂದೂ ಬಣಜಿಗ, ಹಿಂದೂ ಸಾಗರ ಈ ಸಮಾಜಗಳನ್ನ 3ಬಿ ದಲ್ಲಿ‌ ಸೇರಿಸಬೇಕಾ. 2ಎ ದಲ್ಲಿ ಮುಂದುವರೆಸಿಕೊಂಡು‌‌‌ ಕೌಂಟ್​ನಲ್ಲಿ ತರಬೇಕಾ ಎಂಬ ಬಗ್ಗೆ ಚರ್ಚಿಸುತ್ತೇವೆ. 2ಎ ದಲ್ಲಿರುವವರು‌ ಲಿಂಗಾಯತ, ವೀರಶೈವ‌ ಲಿಂಗಾಯತ ಎಂದು ಬರೆಸಿಲ್ಲ. ಆ ಜನಸಂಖ್ಯೆಯನ್ನು ತೆಗೆದುಕೊಂಡರೆ ಇನ್ನು 25 ಲಕ್ಷಕ್ಕೂ ಅಧಿಕವಾಗುತ್ತದೆ. ಹೀಗಾಗಿ ಲಿಂಗಾಯತ ಜನಸಂಖ್ಯೆ ಒಂದು ಕೋಟಿಗೂ ಅಧಿಕವಾಗಿದೆ. ಸದ್ಯ ಜಾತಿಗಣತಿ ವರದಿಯ ಅಧ್ಯಯನ ಮಾಡಿ ತಿಳಿದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ; ವಿ. ಸೋಮಣ್ಣ

ಹಿಂದೂ ಸಾಗರ, ಹಿಂದೂ ಬಣಜಿಗ, ಹಿಂದೂ ಗಾಣಿಗ ಸಮುದಾಯಗಳೆಲ್ಲಾ ಲಿಂಗಯತ ಉಪಪಂಗಡಗಳು. ಅವರನ್ನು 2ಎ ಮೀಸಲಾತಿಯಲ್ಲಿ ಇಟ್ಟುಕೊಂಡು ಕೌಂಟ್​ ಮಾಡಬೇಕ ಎಂಬೆಲ್ಲದರ ಕುರಿರು ಕ್ಯಾಬಿನೆಟ್​ನಲ್ಲಿ ಮಾತನಾಡುತ್ತೇನೆ. ಜಾತಿ ಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದ್ದರಲ್ಲಿ ಯಾರದ್ದು ತಪ್ಪಿಲ್ಲ.
ಲಿಂಗಾಯತ ರೆಡ್ಡಿಗಳು ಹಿಂದೂ ರೆಡ್ಡಿ ಎಂದು ಬರೆಸಿರುತ್ತಾರೆ. ಇವೆಲ್ಲವನ್ನೂ ಪರಿಗಣಿಸಿದಾಗ ಲಿಂಗಾಯತ ಜನಸಂಖ್ಯೆ ಒಂದು ಕೋಟಿಗೂ ಅಧಿಕವಾಗುತ್ತದೆ. 2ಎ ದಲ್ಲಿರೋ ಇವರನ್ನು 3 ಬಿಗೆ ತರಬೇಕಾ ಅಥವಾ ಅದಕ್ಕೆ ಅವರು ಒಪ್ಪುತ್ತಾರಾ ಎಂಬುದನ್ನು ನೋಡಬೇಕು.ಇದೆಲ್ಲ ಅಷ್ಟು ಸರಳವಾಗಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES