ಬೆಂಗಳೂರು : ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಅದ್ದೂರಿ ತೆರೆಬಿದ್ದಿದ್ದು. ಈ ಮೂಲಕ ಕಳೆದ 15 ವರ್ಷಗಳಿಂದ ಕರಗ ಹೊತ್ತಿದ್ದ ಪೂಜಾರಿ ಜ್ಞಾನೇಂದ್ರ ಅವರ ಅವಧಿಯೂ ಕೂಡ ಮುಗಿದಿದೆ. ಮುಂದಿನ ವರ್ಷದಿಂದ ಹೊಸ ಪೂಜಾರಿ ಕರಗ ಹೊರಲಿದ್ದಾರೆ.
ಸಾಂಸ್ಕೃತಿಕ ಹಾಗೂ ಪರಂಪರೆಯ ಹೆಗ್ಗುರುತು ಸಾರುವ ಬೆಂಗಳೂರು ಕರಗ ಶಕ್ತೋತ್ಸವ ಶನಿವಾರ ಮಧ್ಯರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕರಗದ ಪ್ರಸಿದ್ಧ ದ್ರೌಪದಿ ದೇವಿ ಕರಗ ಶಕ್ತ್ಯೋತ್ಸವವು ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ನಡೆಯಿತು. ಮಲ್ಲಿಗೆ ಕಂಪು ಸೂಸುತ್ತ ಹೊರಟ ಕರಗಕ್ಕೆ ಗೋವಿಂದ.. ಗೋವಿಂದ… ನಾಮಸ್ಮರಣೆಯೊಂದಿಗೆ ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಹೊರಟ ಕರಗ ಮೆರವಣಿಗೆಯ ದರ್ಶನ ಪಡೆದು ಲಕ್ಷಾಂತರ ಭಕ್ತರು ಪುನೀತರಾದರು.
ಇದನ್ನೂ ಓದಿ :ಇತಿಹಾಸದಲ್ಲಿ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದ ಕರಗ ಪೂಜಾರಿ ಜ್ಞಾನೇಂದ್ರ
ಧರ್ಮರಾಯ ದೇವಸ್ಥಾನದಲ್ಲಿ ಕಳೆದ 15 ವರ್ಷಗಳಿಂದ ಕರಗ ಹೊರುತ್ತಿದ್ದ ಜ್ಞಾನೇಂದ್ರ, ತುಂಬಾ ಶಿಸ್ತಿನಿಂದ ಕರಗ ಹೊರುವ ಮೂಲಕ ತಮ್ಮ ಅವಧಿಯನ್ನು ಮುಗಿಸಿದ್ದಾರೆ. ಮುಂದಿನ ವರ್ಷದಿಂದ ನೂತನ ಪೂಜಾರಿ ಕರಗ ಹೊರಲಿದ್ದು. ದೇವಾಲಯದ ಆಡಳಿತ ಮಂಡಳಿ ಭೀಮನ ಅಮವಾಸ್ಯೆಯ ದಿನ ಹೊಸ ಪೂಜಾರಿ ಆಯ್ಕೆ ಮಾಡಲ್ಲಿದ್ದಾರೆ ಎಂದು ತಿಳಿದು ಬಂದಿದೆ.