Monday, April 14, 2025

ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ; ವಿ. ಸೋಮಣ್ಣ

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಸರ್ಕಾರ ಜಾತಿಗಣತಿ ಎಂಬ ಜೇನು ಗೂಡಿಗೆ ಕೈಹಾಕಿದ್ದು. ಈ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ. ಜಾತಿ ಗಣತಿ ವರದಿ ಕಾಗಕ್ಕ, ಗೂಬಕ್ಕ ಕಥೆಯಂತಿದೆ. ಸಿದ್ದರಾಮಯ್ಯರಿಗೆ ಈ ಜಾತಿಗಣತಿ ವರದಿ ಮರಣ ಶಾಸನವಾಗಿ ಪರಿಣಮಿಬಹುದು ಎಂದು ಹೇಳಿದರು.

ಜಾತಿ ಗಣತಿ ಕುರಿತು ಮಾಧ್ಯಮ ವರದಿಗಾರರದೊಂದಿಗೆ ಮಾತನಾಡಿದ ಸೋಮಣ್ಣ “ಜಾತಿ ಜನಗಣತಿ ವರದಿ ತಪ್ಪಾಗಿದೆ. ಸಿದ್ದರಾಮಯ್ಯ ಅವರಿಗೆ ಪೂರ್ಣ ಸತ್ಯ ಗೊತ್ತಿದೆ. ಆದರೆ ಅವರು ಕುರ್ಚಿ ಉಳಿಸಿಕೊಳ್ಳುಲು ವರದಿ ಜಾರಿಗೆ ತರಲು ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್‌ ನಾಯಕರು ಅವರನ್ನು ಕರೆದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ ಅನ್ನೋ ನೋವು ಕಾಡುತ್ತೆ ನನಗೆ. ಇದನ್ನೂ ಓದಿ :ನಿದ್ರೆಯಲ್ಲಿದ್ದ ಬಾಲಕಿಗೆ ಹಾವು ಕಡಿತ; ಮಲಗಿದ್ದಲ್ಲೆ ಚಿರನಿದ್ರೆಗೆ ಜಾರಿಗೆ ಬಾಲಕಿ

ನಾವು ನಮ್ಮ ನಾಯಕರು ಒಟ್ಟಿಗೆ ಕೂತು ಈ ವರದಿ ಬಗ್ಗೆ ಚರ್ಚೆ ಮಾಡ್ತೇವೆ.ಮುಂದೇನು ಮಾಡಬೇಕು ಅಂತ ಚರ್ಚೆ ಮಾಡ್ತೇವೆ. ಜಾತಿ ಜನಗಣತಿ ವರದಿ ಕಾಗಕ್ಕ ಗೂಬಕ್ಕ ಕತೆ ಥರ ಇದೆ. ಈ ವರದಿ ಸಿದ್ದರಾಮಯ್ಯಗೇ ಮರಣ ಶಾಸನ ಆಗಬಹುದು. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಪಿತೂರಿ ಮಾಡ್ತಿದ್ದಾರೆ
ಈ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ಎಂದು ಹೇಳಿದರು.

ಇದನ್ನೂ ಓದಿ :ಓಡಿಹೋದ ಮಗಳು, ಪ್ರಾಣ ಬಿಟ್ಟ ತಂದೆ

ಮುಂದುವರಿದು ಮಾತನಾಡಿದ ಸೋಮಣ್ಣ ‘ ಈ ವರದಿಯನ್ನು ಸಿದ್ದರಾಮಯ್ಯ ತಿರಸ್ಕರಿಸಲಿ. ಮತ್ತೊಂದು ಸಮೀಕ್ಷೆಯನ್ನು ಮಾಡಿ, ಇನ್ನೂ ಮೂರು ವರ್ಷ ಸಮಯ ಇದೆ ಸಿದ್ದರಾಮಯ್ಯಗೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ಮಾಡಿಲ್ಲ, ವರದಿ ಪಾರದರ್ಶಕ ಆಗಿಲ್ಲ. ಇದೊಂದು ಜೇನಿಗೂಡಿಗೆ ಕೈ ಹಾಕಿದಂತೆ
ನಿಮ್ಮ ಪಕ್ಷದವರೇ ಏ‌ನೇನೋ ಹಿಡಿದು ತಿವಿತಿದ್ದಾರೆ. ಈ ವರದಿ ಜಾರಿ ಆದರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ವರದಿ ಜಾರಿಯಾದರೆ ಸಿದ್ದರಾಮಯ್ಯ ಒಂಟಿಯಾಗಿ ಹೋಗ್ತಾರ ಅದಕ್ಕೆ ಸಿದ್ದರಾಮಯ್ಯನವರು ಈ ವರದಿಯನ್ನು ತಿರಸ್ಕರಿಸಬೇಕು ಎಂದು ಕೇಂದ್ರ ಸಚಿವ ಸೋಮಣ್ಣ ಆಗ್ರಹಿಸಿದರು.

RELATED ARTICLES

Related Articles

TRENDING ARTICLES