ಬಳ್ಳಾರಿ : ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಹಿಸಿದ ಸಚಿವ ಭೈರತಿ ಸುರೇಶ್ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದು. ಇಡೀ ದೇಶ ಕಂಡ ನಿಷ್ಠಾವಂತ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ಹೇಳಿದರು.
ಬಳ್ಳಾರಿಯ ಕಲ್ಲಕಂಬ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕನಕ ದಾಸರ ಮೂರ್ತಿ ಉದ್ಘಾಟನೆ ಬಳಿಕ ಮಾತನಾಡಿದ ಭೈರತಿ ಸುರೇಶ್ “ಇಡೀ ದೇಶ ಕಂಡ ನಿಷ್ಠಾವಂತ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ.
ಮೊದಲು ಕುರುಬ ಸಮುದಾಯದ ಜನ ಕುರುಬರು ಅಂತಾ ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಆದರೆ ಇದೀಗ ಹೆಮ್ಮೆಯಿಂದ ನಾವು ಕುರುಬರು ಅಂತಾ ಹೇಳಕೊಳ್ಳುವ ಸ್ಥಿತಿ ಇದೆ. ಇದಕ್ಕೆ ಕಾರಣ ಸಿದ್ದರಾಮಯ್ಯ.
ಇದನ್ನೂ ಓದಿ :ಲಿಫ್ಟ್ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ; ನೆಟ್ಟಿಗರಿಂದ ಅಕ್ರೋಶ
ಸಿದ್ದರಾಮಯ್ಯ ಈಗಾಗಲೇ ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿ ಆಡಳಿತ ಮಾಡಿದ್ದಾರೆ. ಈಗ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಎರಡು ವರ್ಷ ಪೂರ್ಣಗೊಳಿಸಿದ್ದಾರೆ, ಉಳಿದ ಮೂರು ವರ್ಷ ಪೂರ್ಣಗೊಳಿಸುತ್ತಾರೆ. ಹತ್ತು ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ಮಾಡಿದವರ ಸಾಲಿಗೆ ಸಿದ್ದರಾಮಯ್ಯ ಅವರು ಹೆಸರು ಸೇರುತ್ತೆ. ಬೈರತಿ ಸುರೇಶ ಏನಿಲ್ಲ ನಾವೆಲ್ಲ ಸಿದ್ದರಾಮಯ್ಯ ಅವರ ಪ್ರತಿಬಿಂಬ ಅಷ್ಟೇ.ಕುರುಬ ಸಮಾಜ ಸೇರಿ ಎಲ್ಲ ಹಿಂದೂಳಿದ ಸಮುದಾಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :ಕಾಂತರಾಜುನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಗಣತಿ ವರದಿ ಬರೆಸಿದ್ದಾರೆ: ಆರ್.ಅಶೋಕ್
ಮುಂದುವರಿದು ಮಾತನಾಡಿದ ಭೈರತಿ ಸುರೇಶ್ ‘ಮುಡಾ ಕೇಸ್‌ನಲ್ಲಿ ಸಿಲುಕಿಸಲು ಬಿಜೆಪಿಯವರು ಕುತಂತ್ರ ಮಾಡಿದರು. ತಾಯಿ ಪಾರ್ವತಮ್ಮನ ಮೇಲೆ ಕೇಸ್ ಹಾಕುವ ಷಡ್ಯಂತ್ರ ಮಾಡಿದ್ರು. ಆದರೆ ಕೋರ್ಟ ಈಗ ಸಿದ್ದರಾಮಯ್ಯರಿಗೆ ಕ್ಲೀನ್ ಚೀಟ್ ಕೊಟ್ಟಿದೆ. ಏನೇ ಕುತಂತ್ರ ಮಾಡಿದ್ರು ಸಿದ್ದರಾಮಯ್ಯ ಅವರ ಶಕ್ತಿ ಕುಂದಿಸಲು ಸಾಧ್ಯ ಇಲ್ಲ. ನಾಗೇಂದ್ರ ಕೂಡ ಎರಡನೇ ಭಾರಿ ಸಚಿವರಾಗುತ್ತಾರೆ ಎಂದು ಹೇಳಿದರು.