ಬೆಂಗಳೂರು : ನಗರದಲ್ಲಿ ಭೀಕರ ಅಗ್ನಿ ಅವಘಡವಾಗಿದ್ದು. ಕೂಲಿ ಕಾರ್ಮಿಕರು ವಾಸಿಸುತ್ತಿದ್ದ 40ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಯಾರಿಗೂ ಸಾವು ನೋವು ಉಂಟಾಗಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿನ ನಾಗವಾರ ಸಮೀಪದ ವೀರಣ್ಣ ಪಾಳ್ಯದಲ್ಲಿ ಘಟನೆ ನಡೆದಿದ್ದು. ಕೂಲಿ ಕಾರ್ಮಿಕರು ವಾಸಿಸುತ್ತಿದ್ದ 40 ಶೆಡ್ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ನಿನ್ನೆ ಸಂಜೆ 7:30ರ ಸುಮಾರಿಗೆ ಘಟನೆ ನಡೆದಿದ್ದ. ಖಾಸಗಿ ಶಾಲೆಯೊಂದರ ಪಕ್ಕದ ಖಾಲಿ ಜಾಗದಲ್ಲಿ ರಾಯಚೂರು ಮೂಲದ ನೂರಾರು ಕೂಲಿ ಕಾರ್ಮಿಕರು ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಆದರೆ ನೆನ್ನೆ ಅಥಾಟ್ ಬೆಂಕಿ ಹತ್ತಿಕೊಂಡಿದ್ದು. ಎಲ್ಲಾ ಶೆಡ್ಗಳು ಬೆಂಕಿಗೆ ಅಹುತಿಯಾಗಿದೆ.
ಇದನ್ನೂ ಓದಿ :ಇತಿಹಾಸದಲ್ಲಿ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದ ಕರಗ ಪೂಜಾರಿ ಜ್ಞಾನೇಂದ್ರ
ಬೆಂಕಿಯನ್ನು ನಂದಿಸಲು ಸ್ಥಳೀಯರು ಯತ್ನಿಸಿದ್ದು. ಪಕ್ಕದ ಸ್ಮಶಾಣದಿಂದ ಪಂಪ್ ಮೂಲಕ ನೀರು ಬಿಟ್ಟು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಬೆಂಕಿ ನಿಯಂತ್ರಣಕ್ಕೆ ಬರದ ಹಿನ್ನಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ.