Wednesday, September 10, 2025
HomeUncategorizedಲಿಫ್ಟ್​​ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ; ನೆಟ್ಟಿಗರಿಂದ ಅಕ್ರೋಶ

ಲಿಫ್ಟ್​​ನೊಳಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ; ನೆಟ್ಟಿಗರಿಂದ ಅಕ್ರೋಶ

ದೊಡ್ಡ ದೊಡ್ಡ ಮಾಲ್​ ಅಪಾರ್ಟ್​ಮೆಂಟ್​​ ಆಫೀಸ್​ಗಳಲ್ಲಿ ಲಿಫ್ಟ್​ ಇರುವುದು ಜನರನ್ನು ಮೇಲೆ ಕೆಳಗಡೆ ಒಯ್ಯೋದಕ್ಕೆ. ಆದರೆ ಯುವಕನೊಬ್ಬ ಮಾತ್ರ ಲಿಫ್ಟನ್ನೆ ಬಾತ್​ ರೂಮ್​ ಅಂದ್ಕೊಂಡಿದ್ದಾನೋ ಏನೋ. ಚಲಿಸೋ ಲಿಫ್ಟ್​ನಲ್ಲಿಯೆ ಮೂತ್ರ ವಿಸರ್ಜನೆ ಮಾಡುವ ತನ್ನ ಕೆಟ್ಟ ಮನಸ್ಥಿತಿಯ ಅನಾವರಣ ಮಾಡಿದ್ದಾನೆ. ಈ ಜಂಟಲ್​ ಮ್ಯಾನ್​ ಅಲ್ಲಲ್ಲಾ.. ಮೆಂಟಲ್​ ಮ್ಯಾನ್​ ಲಿಫ್ಟ್​ನಲ್ಲಿಯೆ ಮೂತ್ರ ವಿಸರ್ಜನೆ ಮಾಡಿರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಈತ ನೋಡೋದಕ್ಕೆ ಒಳ್ಳೆ ವಿದ್ಯಾವಂತನ ತರ ಕಾಣಿಸ್ತಾ ಇದ್ದಾನೆ. ಆದರೆ ಈತ ಮಾಡಿರೋ ಕೆಲಸ ನೋಡಿದರೆ ಇವನಿಗಿಂತ ಹಾಳು ಕೊಂಪೆಲಿ ವಾಸ ಮಾಡೋರೆ ಎಷ್ಟೋ ವಾಸಿ ಅನ್ಸುತ್ತೆ. ಹೌದು ಮೂತ್ರ ಬಂದರೆ ತಡ್ಕೊಳ್ಳೋಕ್ಕಾಗಲ್ಲ ಕರೆಕ್ಟ್. ಹಾಗಂತ ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುವ ಹಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಕೂಡ ಸಿಕ್ಕ ಸಿಕ್ಕಾ ಜಾಗಗಳಲ್ಲಿ ಮೂತ್ರ ಮಾಡುವ ಹಾಗಿಲ್ಲ. ಅಂತವರ ಮೇಲೆ ಕಾನೂನು ಮೂಲಕ ಕ್ರಮ ಕೈಗೊಳ್ಳಬಹುದು. ಆದರೆ ಇಲ್ಲೊಬ್ಬ ಯುವಕ ಮಾತ್ರ ಲಿಫ್ಟ್​ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅನಾಗರಿಕನ ತರ ವರ್ತನೆ ಮಾಡಿದ್ದಾನೆ.

ಇದನ್ನೂ ಓದಿ :ಕಾಂತರಾಜುನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಗಣತಿ ವರದಿ ಬರೆಸಿದ್ದಾರೆ: ಆರ್.ಅಶೋಕ್

ಲಿಫ್ಟ್​ ಇರೋದು ಮೇಲೆ ಕೆಳಗಡೆ ಜನರನ್ನ ಹೊತ್ತೊಯ್ಯೋದಕ್ಕೆ ಅದು ಬಿಟ್ಟು ಮೂತ್ರ ಮಾಡೋದಕ್ಕಲ್ಲ ಈ ಯುವಕ ಲಿಫ್ಟ್​ನಲ್ಲಿ ಹೋಗ್ತಿರ ಬೇಕಾದರೆ ಲಿಫ್ಟ್​ನಲ್ಲಿ ಯಾರೂ ಇಲ್ಲ ಅಂತಾ ಲಿಫ್ಟ್​ ಒಳಗಡನೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇನ್ನು ಲಿಫ್ಟ್​ ಇಳಿಯುವಾಗಲೂ ತಾನು ಮಾಡಿರೋ ಮೂತ್ರವನ್ನು ಕಾಲಿನಿಂದ ಒರಸಿ ಹೊರಗಡೆ ಹಾಕ್ತಿದ್ದಾನೆ. ಯುವಕ ಮೂತ್ರ ವಿಸರ್ಜನೆ ಮಾಡಿರೋ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ಅಸಭ್ಯ ವರ್ತನೆ ಕಂಡು ನೆಟ್ಟಿಗರು ಕೂಡ ಛಿ ಥೂ ಅಂತಾ ಮುಖ ಮೂತಿ ನೋಡದೆ ಉಗಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments