ಮಂಡ್ಯ : ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಒಪ್ಪದ ಹಿನ್ನಲೆ ಕ್ರೂರಿ ಪತಿಯೊಬ್ಬ ಮಾರಣಾಂತಿಕವಾಗಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಹಲ್ಲೆ ಮಾಡಿದ ಕಿರಾತಕನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ತಡರಾತ್ರಿ ಘಟನೆ ನಡೆದಿದ್ದು. ಪಾಲಹಳ್ಳಿಯ ಲಕ್ಷ್ಮೀ ಮತ್ತು ಶ್ರೀಕಾಂತ್ ಇಬ್ಬರು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಶ್ರೀಕಾಂತನ ಕುಟುಂಬಸ್ಥರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಬಳಿಕ ಶ್ರೀಕಾಂತ್ ಕುಟುಂಬಸ್ಥರು ಪತ್ನಿ ಲಕ್ಷ್ಮಿಗೆ ಮತಾಂತರವಾಗಲು ಕಿರುಕುಳ ನೀಡಲು ಆರಂಭಿಸಿದ್ದರು. ಇದನ್ನೂ ಓದಿ :5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಕಿರುಚಾಡಿದಕ್ಕೆ ಕೊ*ಲೆ
ಆದರ ಇದಕ್ಕೆ ಒಪ್ಪದ ಲಕ್ಷ್ಮಿ ತನ್ನ ನೋವನ್ನು ಮೈದುನ ರವಿಕಿರಣ ಬಳಿ ತೋಡಿಕೊಂಡಿದ್ದಳು. ಆದರೆ ನಿನ್ನೆ ರಾಜಿ ಪಂಚಾಯತಿ ಮಾಡಲು ಲಕ್ಷ್ಮೀ ಮತ್ತು ಆಕೆಯ ಸಂಬಂಧಿಕರನ್ನು ಪತಿಯ ಕಡೆಯವರು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಲಕ್ಷ್ಮೀ ಮತ್ತು ಆಕೆಯ ಕುಟುಂಬಸ್ಥರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದು. ಲಕ್ಷ್ಮೀ ಆಕೆಯ ತಾಯಿ ಶೃತಿ ಮತ್ತು ಮೈದುನ ರವಿಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಂತ್ರಸ್ಥರನ್ನು ಶ್ರೀರಂಗಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ :ಭಾಗ್ಯಗಳನ್ನು ಕೊಟ್ಟು, ಬಡವರ ಮನೆ ಹಾಳ್ ಮಾಡ್ತಿದ್ದಾರೆ : ವಿ. ಸೋಮಣ್ಣ
ಬಲವಂತದ ಮತಾಂತರಕ್ಕೆ ಯತ್ನಿಸಿದ ಶ್ರೀಕಾಂತ್ ಕುಟುಂಬಸ್ಥರ ಕುರಿತು ರವಿಕಿರಣ್ ಹಿಂದೂ ಸಂಘಟನೆಗಳಿಗೆ ಮಾಹಿತಿ ನೀಡಿದ್ದು. ಹಲ್ಲೆ ನಡೆಸಿದ ಲಕ್ಷ್ಮಿ ಪತಿ ಶ್ರೀಕಾಂತ್, ಆತನ ಅಣ್ಣ ಹರೀಶ್ , ಹರಿಶ್ ಪತ್ನಿ ನಾಗವೇಣಿ, ಅವರ ಮಕ್ಕಳು ಸೇರಿ ಹಲವರ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.