ಬಳ್ಳಾರಿ : ಮಲಗಿದ್ದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಕರುಣಾಜನಕ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು. ನಿದ್ರೆಯಲ್ಲಿದ್ದ ಬಾಲಕಿ ಮಲಗಿದ್ದಲ್ಲೆ ಚಿರ ನಿದ್ರೆಗೆ ಜಾರಿದ್ದಾಳೆ. ಮೃತ ಬಾಲಕಿಯನ್ನು 13 ವರ್ಷದ ಶ್ರಾವಣಿ ಎಂದು ಗುರುತಿಸಲಾಗಿದೆ.
ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ಘಟನೆ ನಡೆದಿದ್ದು. ಲಕ್ಷ್ಮಣ ಹಾಗೂ ಶೇಕಮ್ಮರ ಮಗಳಾದ ಶ್ರಾವಣಿ ತಂದೆ-ತಾಯಿಯ ಜೊತೆ ಹೊಸ ಮೋಕಾ ಗ್ರಾಮದಲ್ಲಿ ವಾಸವಾಗಿದ್ದಳು. ತೀವ್ರ ಬಡತನವಿದ್ದ ಕಾರಣ ದಂಪತಿಗಳು ತೀರ ಹಳೆಯ ಮನೆಯಲ್ಲಿ ವಾಸವಾಗಿದ್ದರು. ಬಡತನದಲ್ಲಿಯೂ ದಂಪತಿಗಳು ತಮ್ಮ ಮಗಳಿಗೆ ಶಿಕ್ಷಣ ನೀಡುತ್ತಿದ್ದರು. ಬಾಲಕಿ ಶ್ರಾವಣಿ ಮೋಕ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು.
ಇದನ್ನೂ ಓದಿ:ಓಡಿಹೋದ ಮಗಳು, ಪ್ರಾಣ ಬಿಟ್ಟ ತಂದೆ
ಆದರೆ ರಾತ್ರಿ ಬಾಲಕಿ ಶ್ರಾವಣಿ ಮಲಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ನಾಗರಹಾವು ಕಚ್ಚಿದ್ದು. ಕೈ, ಕಾಲು ಸೇರಿದಂತೆ ಬಾಲಕಿಗೆ ಮೂರು ಬಾರಿ ಹಾವು ಕಚ್ಚಿದೆ. ಹಾವು ಕಡಿದರೂ ಎಚ್ಚರವಾಗದೆ ಮಲಗಿದ್ದ ಬಾಲಕಿ ಶ್ರಾವಣಿ ನಿದ್ದೆಯಲ್ಲಿಯೆ ಚಿರನಿದ್ರೆಗೆ ಜಾರಿದ್ದಾಳೆ. ಬೆಳಿಗ್ಗೆ ಎದ್ದು ನೋಡಿದಾಗ ಬಾಲಕಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು. ಮೃತ ಮಗಳನ್ನು ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.