ಗ್ವಾಲಿಯರ್ : ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ಮದುವೆಯಾಗಿದ್ದಕ್ಕೆ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ರಿಷಿರಾಜ್ ಅಲಿಯಾಸ್ ಸಂಜು ಜೈಸ್ವಾಲ್ ಎಂದು ಗುರುತಿಸಲಾಗಿದೆ.
ಗ್ವಾಲಿಯರ್ನಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಂಜು ಜೈಸ್ವಾಲ್ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಲಾಲ್‌ಚಂದಾನಿಯವರ ಹೇಳಿಕೆ ಪ್ರಕಾರ ‘ಮೃತರ ಮಗಳು ಸುಮಾರು 15 ದಿನಗಳ ಹಿಂದೆ ಬೇರೆ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆಯನ್ನು ಇಂದೋರ್‌ಗೆ ಪತ್ತೆಹಚ್ಚಿ ಕರೆತರಲಾಯಿತು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ತಾನು ಕಾನೂನುಬದ್ಧವಾಗಿ ಮದುವೆಯಾಗಿರುವುದಾಗಿ ಮತ್ತು ತನ್ನ ಪತಿಯೊಂದಿಗೆ ಹೋಗಲು ನಿರ್ಧರಿಸಿರುವುದಾಗಿ ಅವಳು ಹೇಳಿದ್ದಳು.
ಇದನ್ನೂ ಓದಿ:ದ್ರೌಪದಿ ದೇವಿ ಕರಗ ಹೊರುತ್ತಿದ್ದ ಜ್ಞಾನೇಂದ್ರ ಅವಧಿ ಮುಕ್ತಾಯ; ಇದೇ ಕೊನೆ ಕರಗ..
ಮೃತ ಸಂಜು ಜೈಸ್ವಾಲ್ ತಮ್ಮ ಮಗಳ ಆಧಾರ್ ಕಾರ್ಡ್‌ನ ಪ್ರಿಂಟ್‌ಔಟ್‌ನಲ್ಲಿ ತಮ್ಮ ಮನಸ್ಸಿಗಾದ ಬೇಸರದ ಬಗ್ಗೆ ಬರೆದಿದ್ದಾರೆ. ‘‘ಹರ್ಷಿತಾ ನೀನು ತಪ್ಪು ಮಾಡಿದ್ದೀಯಾ, ನಾನು ಹೋಗುತ್ತಿದ್ದೇನೆ, ನಿಮ್ಮಿಬ್ಬರನ್ನು ನಾನು ಕೊಲ್ಲಬಹುದಿತ್ತು, ಆದರೆ ಮಗಳನ್ನು ಹೇಗೆ ಕೊಲ್ಲಲಿ, ಹೀಗಾಗಿ ನಾನೇ ಹೋಗುತ್ತಿದ್ದೇನೆ ’’ ಎಂದು ಬರೆದಿದ್ದರು.
ಇದನ್ನೂ ಓದಿ:ಕೂಲಿ ಕಾರ್ಮಿಕರು ವಾಸಿಸುತ್ತಿದ್ದ 40ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗಾಹುತಿ
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಮಾತನಾಡಿ, “ಇದು ಅತ್ಯಂತ ದುರಂತ ಘಟನೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಯಸ್ಕ ಹುಡುಗಿ ಬೇರೆ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿದ್ದಳು. ತಂದೆ ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಆತ್ಮಹತ್ಯೆ ಪತ್ರವು ಈ ಕಳವಳಗಳನ್ನು ಪ್ರತಿಬಿಂಬಿಸುತ್ತದೆ.