ಹರಿಯಾಣ : ಬಾಲಿವುಡ್ ಹಾಸ್ಯ ದೃಶ್ಯದಂತೆ ಭಾಸವಾಗುವ ನಿಜ ಜೀವನದ ಘಟನೆಯೊಂದು ಹರಿಯಾಣದ ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು. ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಸೂಟ್ಕೇಸ್ನಲ್ಲಿ ಬಚ್ಚಿಟ್ಟುಕೊಂಡು ಹಾಸ್ಟೆಲ್ಗೆ ಕರೆದುಕೊಂಡು ಬಂದಿದ್ದು. ಭದ್ರತಾ ಸಿಬ್ಬಂದಿಗಳ ತಪಾಸಣೆ ವೇಳೆ ಯುವತಿ ಸಿಕ್ಕಿಬಿದ್ದಿದ್ದಾಳೆ.
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಮಹಿಳೆಯರ ಹಾಸ್ಟೆಲ್ಗೆ ನುಗ್ಗಿದ್ದ ಘಟನೆ ವರದಿಯಾಗಿತ್ತು. ಯುವತಿಯ ವೇಷ ಧರಿಸಿ ಹಾಸ್ಟೆಲ್ಗೆ ನುಗ್ಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಆದರೆ ಇದನ್ನೂ ಮೀರುಸುವಂತ ಘಟನೆ ಹರಿಯಾಣದ ಸೋನಿಪತ್ನಲ್ಲಿ ನಡೆದಿದ್ದು. ಯುವಕನೊಬ್ಬ ತನ್ನ ಗೆಳತಿಯನ್ನು ಸೂಟ್ಕೇಸ್ನಲ್ಲಿ ಕೂರಿಸಿಕೊಂಡು ಹಾಸ್ಟೆಲ್ಗೆ ಕರೆತಂದಿದ್ದಾರೆ. ಇದನ್ನೂ ಓದಿ :ಭೀಕರ ಅಪಘಾತ; ಕೆಟ್ಟು ನಿಂತಿದ್ದ ಕ್ಯಾಂಟರ್ಗೆ ಬಸ್ ಡಿಕ್ಕಿಯಾಗಿ 20ಕ್ಕು ಹೆಚ್ಚು ಪ್ರಯಾಣಿಕರಿಗೆ ಗಾಯ
A boy tried sneaking his girlfriend into a boy’s hostel in a suitcase.
Gets caught.
Location: OP Jindal University pic.twitter.com/Iyo6UPopfg
— Squint Neon (@TheSquind) April 12, 2025
ಒಪಿ ಜಿಂದಲ್ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ಘಟನೆ ನಡೆದಿದ್ದು. ಅದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಯುವತಿಯನ್ನು ಹಾಸ್ಟೆಲ್ಗ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ. ಯುವತಿಯನ್ನು ಸೂಟ್ಕೇಸ್ನಲ್ಲಿ ಕೂರಿಸಿಕೊಂಡು ಹಾಸ್ಟೆಲ್ ಕರೆತಂದಿದ್ದು. ಸೂಟ್ಕೇಸ್ನಲ್ಲಿ ಕೂತಿದ್ದ ಯುವತಿ ಕಿರುಚಿಕೊಂಡಿದ್ದಾಳೆ. ಇದರಿಂದ ಅನುಮಾನಗೊಂಡ ಭದ್ರತ ಸಿಬ್ಬಂದಿ ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ :ಮೈಮುಟ್ಟಿ ಸ್ಕ್ಯಾನಿಂಗ್ ಮಾಡಿದ್ದಕ್ಕೆ ಹಲ್ಲೆ; ಮುಟ್ಟದೆ ಸ್ಕ್ಯಾನಿಂಗ್ ಹೇಗೆ ಮಾಡುವುದು ಎಂದು ವೈದ್ಯರ ಪ್ರತಿಭಟನೆ
ವೈರಲ್ ಆಗಿರುವ ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿ ಸೂಟ್ಕೇಸ್ನ್ನು ಓಪನ್ ಮಾಡುತ್ತಿರುವ ದೃಷ್ಯ ಸೆರೆಯಾಗಿದ್ದು. ಅದರೊಳಗಿಂದ ವಿದ್ಯಾರ್ಥಿನಿಯೊಬ್ಬಳು ಹೊರಬಂದಿದ್ದಾಳೆ. ಸೂಟ್ಕೇಸ್ನಲ್ಲಿ ಯಾರು ಅಡಗಿದ್ದರು ಎಂಬುದನ್ನು ಹಾಸ್ಟೆಲ್ ಸಿಬ್ಬಂದಿ ಅಥವಾ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಇನ್ನು ಸ್ಪಷ್ಟಪಡಿಸಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವಳು ಹುಡುಗನ ಗೆಳತಿ ಎಂದು ಹೇಳಿಕೊಂಡಿದ್ದಾರೆ. ಈ ಘಟನೆಯಿಂದ ಹಾಸ್ಟೆಲ್ ಭದ್ರತೆ ಕುರಿತು ಅನುಮಾನಗಳು ಶುರುವಾಗಿದೆ.