ಬೆಂಗಳೂರು : ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿಗೆ ಹಣ ನೀಡುತ್ತಿಲ್ಲ ಎಂಬ ಆರೋಪ ರಾಜ್ಯ ಸರ್ಕಾರದ ವಿರುದ್ದ ನಿರಂತರವಾಗಿ ಕೇಳಿಬರುತ್ತಿದೆ. ಕೆಲ ಸಮಯದಲ್ಲಿ ಪರೋಕ್ಷವಾಗಿ ಸರ್ಕಾರ ಇದನ್ನು ಒಪ್ಪಿಕೊಂಡಿದೆ. ಆದರೆ ಬೆಂಗಳೂರಿನ ಟ್ಯಾಕ್ಸ್ ಪೇಯರ್ಸ್ ವಾಸವಾಗಿರುವ ಏರಿಯಾಗಳಲ್ಲಿ ಒಂದಾದ ಮಹದೇವಪುರ ಕ್ಷೇತ್ರದ ಜನರು ಸರ್ಕಾರದ ವಿರುದ್ದ ವಿಭಿನ್ನವಾಗಿ ಹಾಡು ಹೇಳಿ ಪ್ರತಿಭಟನೆ ನಡೆಸಿದ್ದು. ಗುಂಡಿ ಮುಚ್ಚದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಕರಗಕ್ಕೆ ಹಣದ ಕೊರತೆ; ಹಣವಿಲ್ಲದೇ ಬರ್ಬಾದ್ ಆಯ್ತಾ ಬಿಬಿಎಂಪಿ..?
ಮಹಾದೇವಪುರದ ವಿಧಾನಸಭಾ ಕ್ಷೇತ್ರದ, ಬೆಳೆಗೆರೆ ರಸ್ತೆಯಲ್ಲಿ ಪ್ರತಿಭಟನೆ ನಡೆದಿದೆ. ಅಭಿವೃದ್ದಿಗೆ ಹಣವಿಲ್ಲದೇ ನಗರದ ರಸ್ತೆಗಳಲ್ಲೇ ಗುಂಡಿಮಯವಾಗಿದ್ದು. ಇದರ ವಿರುದ್ದ ಬೆಂಗಳೂರಿನ ಟ್ಯಾಕ್ಸ್ ಪೇಯರ್ಸ್ ವಿಭಿನ್ನವಾಗಿ ಹೋರಾಟ ಮಾಡಿದ್ದಾರೆ. “ಗುಂಡಿಯ ವಿಷ್ಯ ಬ್ಯಾಡವೋ ಶಿಷ್ಯ..ಟ್ಯಾಕ್ಸ್ ಸೂಪರ್.. ಆದ್ರೆ ಗುಂಡಿ ಡೆಂಜರ್” ಎಂದು ತಮ್ಮದೇ ಸಾಹಿತ್ಯ ರಚಿಸಿಕೊಂಡು ನೋವಿನ ಹಾಡನ್ನು ಹಾಡಿರುವ ಬೆಂಗಳೂರಿಗರು. ಇದು ಗುಂಡಿಯಿಂದ ಕೈ-ಕಾಲು ಮುರಿದುಕೊಂಡವರಿಂದ ಹುಟ್ಟಿಬಂದ ಸಾಹಿತ್ಯವೆಂದು ಹೇಳಿದ್ದಾರೆ.
ಜೊತೆಗೆ ತಮ್ಮ ಸಮಸ್ಯೆಗಳನ್ನು ಟೀಶರ್ಟ್ಗಳ ಮೇಲೆ ಪ್ರಿಂಟ್ ಮಾಡಿಸಿದ್ದು. ಒಕ್ಕೊರಳಿನಿಂದ ಹಾಡ ಹೇಳಿ, ಗುಂಡಿ ಪೂಜೆ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.