ನವದೆಹಲಿ: ಮೆಸೇಜಿಂಗ್ ಫ್ಲಾಟಫಾರ್ಮ್ ಅತಿದೊಡ್ಡ ಆ್ಯಪ್ ವಾಟ್ಸಪ್ನ ಸರ್ವರ್ನಲ್ಲೂ ವ್ಯತ್ಯಯ ಕಂಡುಬಂದಿದ್ದು. ವಾಟ್ಸಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲವು ಬಳಕೆದಾರರು ದೂರು ನೀಡಿದ್ದಾರೆ.
ಇಂದು ಡಿಜಿಟಲ್ ಆ್ಯಪ್ಗಳ ಸರ್ವರ್ನಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತಿದ್ದು. ಮಧ್ಯಹ್ನಾ ಪೇಮೆಂಟ್ ಆ್ಯಪ್ಗಳು ಸರಿಯಾಗಿ ಕಾರ್ಯ ನಿರ್ವಹಿಸದೆ. ಬಳಕೆದಾರರಿಗೆ ಕೆಲ ಕಾಲ ಸಮಸ್ಯೆ ನೀಡಿದವು. ಇದರ ಬೆನ್ನಲ್ಲೇ ಅತಿದೊಡ್ಡ ಮೇಸೆಜಿಂಗ್ ಫ್ಲಾಟಫಾರ್ಮ್ ಆಗಿರುವ ಮೆಟಾ ಮಾಲಿಕತ್ವದ ವಾಟ್ಸಪ್ ಅಪ್ಲಿಕೇಶನಲ್ಲಿ ಸಮಸ್ತೆ ಕಂಡು ಬಂದಿದ್ದು. ಬಳಕೆದಾರರು ತಮ್ಮ ಸ್ಟೇಟಸ್‌ಗಳನ್ನು ಅಪ್‌ಲೋಡ್ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಸಮಸ್ಯೆಯಾಗುತ್ತಿದೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ಆಸ್ತಿಗಳು ED ವಶ
ಬಳಕೆದಾರರು ಸಲ್ಲಿಸಿದ ದೋಷಗಳು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸಿ ಸ್ಥಗಿತಗಳನ್ನು ಪತ್ತೆಹಚ್ಚುವ ಡೌನ್‌ಡೆಕ್ಟರ್ ಪ್ರಕಾರ, ಸಂಜೆ 5:13 ರವರೆಗೆ ವಾಟ್ಸಾಪ್ ವಿರುದ್ಧ ಕನಿಷ್ಠ 463 ದೂರುಗಳು ದಾಖಲಾಗಿವೆ. 80% ಕ್ಕಿಂತ ಹೆಚ್ಚು ದೂರುಗಳು ಸಂದೇಶಗಳನ್ನು ಕಳುಹಿಸುವುದಕ್ಕೆ ಸಂಬಂಧಿಸಿವೆ. 15% ಜನರು ಅಪ್ಲಿಕೇಶನ್‌ನಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ. 4% ಲಾಗಿನ್ ಸಮಯದಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ.