ವಿಜಯಪುರ : ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿ ಸ್ನಾತಕೋತ್ತರ ಪದವಿ ವೈದ್ಯ ವಿದ್ಯಾರ್ಥಿ ಮೇಲೆ ಗರ್ಭಿಣಿ ಮಹಿಳೆ ಪತಿ ಸೇರಿ ಇಬ್ಬರು ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಸ್ಕ್ಯಾನಿಂಗ್ ಮಾಡುವ ವೇಳೆ ವೈದ್ಯ ಮೈಮುಟ್ಟಿದ್ದಾನೆ ಎಂದು ಆರೋಪಿಸಿ ಈ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು. ಘಟನೆ ಖಂಡಿಸಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆಯ ರೇಡಿಯಾಲಜಿ ವಿಭಾಗದಲ್ಲಿ ಏಪ್ರಿಲ್ 9ರಂದು ಯಾಸ್ಮಿನಾ ಎಂಬ ಗರ್ಭಿಣಿ ಮಹಿಳೆ ಸ್ಕ್ಯಾನಿಂಗ್ ಮಾಡಿಸಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡುವ ವೇಳೆ ವೈದ್ಯ ಮಹಿಳೆಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ. ಇದನ್ನು ತಿಳಿದ ಮಹಿಳೆಯ ಪತಿ ಏಪ್ರಿಲ್ 11ರಂದು ಬೆಳಿಗ್ಗೆ 10-05ಕ್ಕೆ ಜಿಲ್ಲಾಸ್ಪತ್ರೆಗೆ ಆಗಮಿಸಿ ಸ್ಕ್ಯಾನಿಂಗ್ ಕೊಠಡಿಯೊಳಗೆ ತೆರಳಿ ಕಪಾಳಕ್ಕೆ ಹಾಗೂ ಹೊಟ್ಟೆಗೆ ಒದ್ದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ದೀದಿ ನಾಡಲ್ಲಿ ವಕ್ಫ್ ವಿರುದ್ದ ಪ್ರತಿಭಟನೆ; ವಾಹನಗಳಿಗೆ ಬೆಂಕಿ, ರೈಲಿನ ಮೇಲೆ ಕಲ್ಲು ತೂರಾಟ
ಇದನ್ನು ಖಂಡಿಸಿರುವ ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು. ಮುಟ್ಟದೆ ಸ್ಕ್ಯಾನಿಂಗ್ ಮಾಡುವುದು ಹೇಗೆ. ರೋಗಿಗೆ ಚಿಕಿತ್ಸೆ ಕೊಡಬೇಕಾದರೆ ಪರೀಕ್ಷಿಸಬೇಕು, ಆದರೆ ಇದನ್ನೇ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದರು ಅನ್ನೋದಾದರೆ ಚಿಕಿತ್ಸೆ ನೀಡುವುದು ಹೇಗೆ ಅಂತ ವೈದ್ಯರು ಪ್ರಶ್ನಿಸಿದ್ದಾರೆ. ಪೊಲೀಸರು ಹಲ್ಲೆಗೊಳಗಾದ ವೈದ್ಯನಿಂದ ದೂರು ಪಡೆಯುವಾಗಲೇ ಜಿಲ್ಲಾಸ್ಪತ್ರೆಗೆ ಗರ್ಭಿಣಿ ಮಹಿಳೆ ಮತ್ತು ಪತಿಯ ಪರವಾಗಿ ಮುಸ್ಲಿಂ ಮುಖಂಡರು ಆಗಮಿಸಿ , ಜಿಲ್ಲಾ ಶಸ್ತ್ರ ಚಿಕಿತ್ಸಕರ ಕೊಠಡಿಯಲ್ಲಿ ಹೈಡ್ರಾಮಾ ಸೃಷ್ಟಿಸಿದರು.
ಈ ವೇಳೆ ಮುಸ್ಲಿಂ ಮುಖಂಡರು ಮತ್ತು ವೈದ್ಯರ ನಡುವೆ ವಾಗ್ವಾದ ನಡೆದಿದ್ದು. ವೈದ್ಯನದೇ ತಪ್ಪು ಎನ್ನುವ ರೀತಿಯಲ್ಲಿ ವಾದ ಮಾಡಿ, ಆತನಿಂದ ಕ್ಷಮಾಪಣೆ ಕೇಳಿಸಿದ್ದು. ಹಲ್ಲೆ ಮಾಡಿದವನಿಂದಲೂ ಕ್ಷಮೆ ಕೇಳಿಸಿದ್ದಾರೆ. ಈ ಹೈಡ್ರಾಮದಿಂದ ಘಟನ ಸ್ಥಳದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದ್ದು. ಚಿಕಿತ್ಸೆಗೆ ಎಂದು ಬಂದ ರೋಗಿಗಳು ಕೆಲ ಕಾಲ ಪರದಾಡುವಂತಾಯಿತು.