Saturday, April 12, 2025

ಕರಗಕ್ಕೆ ಹಣದ ಕೊರತೆ; ಹಣವಿಲ್ಲದೇ ಬರ್ಬಾದ್​ ಆಯ್ತಾ ಬಿಬಿಎಂಪಿ..?

ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭವಾಗಿದ್ದು. ಇನ್ನೇನು ಕೆಲವೇ ಗಂಟೆಗಳಲ್ಲಿ ಕರಗ ಉತ್ಸವ ಆರಂಭವಾಗಲಿದೆ. ಆದರೆ ಕರಗಕ್ಕೆ ಎಂದು ಬಿಬಿಎಂಪಿ ಬಜೆಟ್​ನಲ್ಲಿ ಮೀಸಲಿಟ್ಟಿದ್ದ ಹಣವನ್ನು ಬಿಡುಗಡೆ ಮಾಡದೇ ಬಿಬಿಎಂಪಿ ನಿರ್ಲಕ್ಷ ತೋರುತ್ತಿದ್ದು. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು ಕರಗಕ್ಕೆ ಎಂದು ಬಿಬಿಎಂಪಿ 1.5 ಕೋಟಿ ಹಣವನ್ನು ಮೀಸಲಾಗಿರಿಸಿದ್ದು. ಆದರೆ ಈತನಕ ಕರಗಕ್ಕೆ ಎಂದು ಒಂದೇ ಒಂದು ರೂಪಾಯಿ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಧರ್ಮರಾಯ ದೇವಾಲಯದ ಅಧ್ಯಕ್ಷ ಸತೀಶ್ ಅಸಮಧಾನ ಹೊರಹಾಕಿದ್ದು. ” ಕರಗಕ್ಕೆ ಒಂದುವರೆ ಕೋಟಿ‌ ಮೀಸಲಿಡಲಾಗಿದೆ ಆದರೆ ಇದುವರೆಗೆ ದುಡ್ಡು ಬಂದಿಲ್ಲ. ನಾವೇ ದುಡ್ಡು ಹಾಕಿ ಜಾತ್ರೆ ನಡೆಸುತ್ತಿದ್ದೇವೆ ಬಜೆಟ್​ನಲ್ಲಿ ಹಣ ಮೀಸಲಿಡಲಾಗಿದೆ.

ಇದನ್ನೂ ಓದಿ :ಯತ್ನಾಳ್ ಹತ್ಯೆಗೆ ಸಂಚು, ಮತ್ತೊಂದು ವಿಡಿಯೋ ಬಹಿರಂಗ: Z ಕ್ಯಾಟಗರಿ ಭದ್ರತೆ ನೀಡಲು ಮೋದಿಗೆ ಮನವಿ

ಆದರೆ ಹಣ ಬಿಡುಗಡೆಗೆ ಪಿಆರ್ ರಮೇಶ್ ಸೇರಿ ಮುಜರಾಯಿ ಇಲಾಖೆ ಅಧಿಕಾರಿಗಳ ಅಡ್ಡಿ ಪಡಿಸುತ್ತಿದ್ದಾರೆ. ಈ ಹಿಂದೆ ಒಂದು ವಾರ ಮುಂಚೆ ೫೦ ಲಕ್ಷ ಅಡ್ವಾನ್ಸ್ ಆಗಿ ಕೊಡ್ತಿದ್ದರು. ಈಗ ಒಂದೇ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಕರಗದ ಕೊನೆ ದಿನವಾದರೂ ದುಡ್ಡು ನೀಡದ ಬಿಬಿಎಂಪಿ 

ಬೆಂಗಳೂರಿನ ಹೆಮ್ಮೆಯ ಕರಗೋತ್ಸವವನ್ನೇ ಬಿಬಿಎಂಪಿ-ಮುಜರಾಯಿ ಇಲಾಖೆ ಕಡೆಗಣಿಸಿದಂತೆ ಕಾಣುತ್ತಿದ್ದು. ಜಾತ್ರೆ ಶುರುವಾಗಿ ಎಂಟು ದಿನಗಳಾದರೂ ಸರ್ಕಾರದಿಂದ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಇಂದು ದ್ರೌಪದಿ ದೇವಿಯ ಕರಗೋತ್ಸವದ ಕಡೇ ದಿನವಾಗಿದ್ದು. ಕರಗದ ವ್ಯವಸ್ಥಾಪನ ಮಂಡಳಿ,ಪೂಜಾರಿಗಳೇ ಹಣ ಹಾಕಿಕೊಂಡು ಕರಗ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ : KSRTC ಬಸ್​​ನಲ್ಲಿ ಪ್ರಯಾಣಿಸಿ ಸರಳತೆ ಮೆರೆದ ಸಚಿವ ಕೃಷ್ಣಭೈರೇಗೌಡ

ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಹಣ ಬಿಡುಗಡೆ ಮಾಡ್ತೀವಿ ಎಂದು ಯಾಮಾರಿಸಿದ್ದು. ಈಗ ನೋಡಿದ್ರೆ ಸರ್ಕಾರಿ ರಜೆ ಇದೆ, ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಶಕ್ತ್ಯೋತ್ಸವಕ್ಕೆ 1000 ಕ್ಕೂ ಹೆಚ್ಚು ಹಾರಗಳನ್ನ ತರಬೇಕು. ಇಲ್ಲಿಯವರೆಗೆ ನಮ್ಮ ಸ್ವಂತ ಹಣವನ್ನ ಹಾಕಿ ಜಾತ್ರೆ ಮಾಡ್ತಿದ್ದೇವೆ ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಸತೀಶ್ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES