Wednesday, April 16, 2025

ಯತ್ನಾಳ್​ ತಲೆ ಕತ್ತರಿಸಬೇಕು; ಪ್ರಚೋದನಕಾರಿ ಆಡಿಯೋ ಹರಿಬಿಟ್ಟ ಕಿಡಿಗೇಡಿ

ವಿಜಯಪುರ : ಮಹಮ್ಮದ್​ ಪೈಗಂಬರ್​ ವಿರುದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಳ್​ ಅವಹೇಳನಕಾರಿ ಹೇಳಿಕೆ ಕುರಿತು ಕಿಡಿಗೇಡಿ ಯುವಕನೊಬ್ಬ ಆಡಿಯೋ ಹರಿಬಿಟ್ಟಿದ್ದು. “ಈ ಬಾರಿ ಯತ್ನಾಳ್​ಗೆ ಫೈನಲ್ ಡೇ, ಆತ ಅರೆಸ್ಟ್​ ಆಗಬೇಕು ಅಥವ ಆತನ ತಲೆಯನ್ನು ಕತ್ತರಿಸಬೇಕು ಎಂಬ ಪ್ರಚೋದನಕಾರಿ ಆಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯತ್ನಾಳ್. ಈ ಕಾರ್ಯಕ್ರಮದಲ್ಲಿ ಪೈಗಂರ್​ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇದರ ವಿರುದ್ದ ಗೋಲ್​ಗುಂಬಜ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಇದೀಗ ಯತ್ನಾಳ್​ ವಿರುದ್ದ ಇದೇ 15 ರಂದು ಮೋರ್ಚ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ರಾಡ್​ನಿಂದ ಹೊಡೆದು ಹೆತ್ತ ತಾಯಿಯನ್ನೆ ಕೊ*ಲೆ ಮಾಡಿದ ಮಗ

ಈ ಕುರಿತು ಆಡಿಯೋ ಮಾಡಿರುವ ಯುವಕ ‘ ವಿಜಯಪುರದಲ್ಲಿ ನಡೆದ NMC ಸಭೆಯಲ್ಲಿ ಮುಸ್ಲಿಂ ಮುಖಂಡರು, ಉಲ್ಮಾಗಳು ಸೇರಿ ಸಭೆ ಮಾಡಲಾಗಿದೆ. ಪೈಗಂಬರ್ ವಿರುದ್ದ ಮಾತನಾಡಿದ ಯತ್ನಳ್ ಮನೆಗೆ ರ್ಯಾಲಿ ಮಾಡಬೇಕು. ಅದಕ್ಕಾಗಿ ಜನರನ್ನು ಸೇರಿಸಬೇಕು. ಅಂಬೆಡ್ಕರ್​ ಸರ್ಕಲ್​ನಿಂದ ಹೊರಡುವ ರ‍್ಯಾಲಿ, ಅಲ್ಲಿಂದ ಯತ್ನಾಳ್ ಮನೆ ಕಡೆಗೆ ನುಗ್ಗಬೇಕು. ಈ ರ‍್ಯಾಲಿಗೆ ಬರುವವರು ನಿಮ್ಮ ಗೆಳಯರನ್ನು ಕರೆದುಕೊಂಡು ಬನ್ನಿ ಎಂದು ಕರೆ ನೀಡಲಾಗಿದೆ.

ಇದನ್ನೂ ಓದಿ :ಬೊಲೆರೋ ವಾಹನ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ; ಒಂದೇ ಗ್ರಾಮದ ನಾಲ್ವರು ಸಾ*ವು

ಮುಂದುವರಿದು ಆಡಯೋದಲ್ಲಿ ಮಾತನಾಡಿರುವ ಯುವಕ “ಈ ಬಾರಿ ಯತ್ನಾಳ್​ಗೆ ಪೈನಲ್ ಡೇ, ಈ ಬಾರಿ ಆತ ಅರೆಸ್ಟ್ ಆಗಬೇಕು ಇಲ್ಲ, ಆತನ ತಲೆಯನ್ನ ಕತ್ತರಿಸಬೇಕು..ಸರ ತನ್ ಸೇ ಜುದಾ ಎಂದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈ ಕಾರ್ಯಕ್ಕೆ ಇಲ್ಲರು ತಯಾರಾಗಿ. ಈಗಾಗಲೇ‌ ಮುಸ್ಲಿಂಮರು ಇದನ್ನು ನಿರ್ಧರಿಸಿದ್ದಾರೆ. 15ನೇ ತಾರೀಕು ಯತ್ನಾಳ್​ಗೆ ಫೈನಲ್​ ಡೇ, ಅಂದು ಯತ್ನಾಳ್​ ನೇರವಾಗಿ ಜಹಾನತ್​ಗೆ ಹೋಗ್ತಾನೆ. ಈ ಕುರಿತು ಉಲ್ಮಾಗಳು. ಮುಸ್ಲಿಂ ಮುಖಂಡರು, ಸದಸ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಇದೀಗ ಈ ಆಡಿಯೋ ವಿಜಯಪುರದಲ್ಲಿ ಆತಂಕ ಸೃಷ್ಟಿಸಿದೆ

RELATED ARTICLES

Related Articles

TRENDING ARTICLES