Friday, April 18, 2025

4 ಸಾವಿರ ಜನರಿಗೆ ಕಂಟಕವಾಗಲಿದೆಯಾ ಪ್ರಮೋದ ದೇವಿ ಪತ್ರ: ಊರಿಗೆ ಊರನ್ನೇ ಕಳೆದುಕೊಳ್ಳುವ ಭೀತಿ

ಚಾಮರಾಜನಗರ : ಮೈಸೂರು ರಾಜಮಾತೆ ಪ್ರಮೋದ ದೇವಿ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದು. ಇದೀಗ ಈ ಪತ್ರ ಸುಮಾರು 4 ಸಾವಿರ ಜನರ ಜೀವನಕ್ಕೆ ಕಂಟಕವಾಗಿದೆ. ಚಾಮರಾಜನಗರದ ಸಿದ್ದಯ್ಯನಪುರ ಗ್ರಾಮದ ಜನರು ತಮ್ಮ ಗ್ರಾಮವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಚಾಮರಾಜನಗರದಲ್ಲಿರುವ ಮೈಸೂರು ಮಹರಾಜರಿಗೆ ಸೇರಿರುವ ಆಸ್ತಿಯ ಖಾತೆ ಮಾಡಿಕೊಡುವಂತೆ ರಾಜಮಾತೆ ಪ್ರಮೋದದೇವಿಯವರು ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದರು. ಈ ಪತ್ರ ಬರೆದ ಬೆನ್ನಲ್ಲೆ ಸಿದ್ದಯ್ಯನಪುರ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇದನ್ನೂ ಓದಿ :ಅಣ್ಣಮ್ಮ ದೇವಿಯ ಹರಕೆ ತೀರಿಸಿದ ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀ

ಸಿದ್ದಯ್ಯನಪುರ ಗ್ರಾಮದ ಮೂಲ ಹೆಸರು ಜಯಚಾಮರಾಜೇಂದ್ರ ಪುರಂ ಆಗಿದ್ದು. ಮಹರಾಜ ಜಯಚಾಮರಾಜೇಂದ್ರ ಒಡೆಯರ್​ ಅವರು ಈ ಗ್ರಾಮದ 1035 ಎಕರೆ ಜಮೀನನ್ನು ಈ ಗ್ರಾಮದ ಜನರಿಗೆ ದಾನವಾಗಿ ನೀಡಿದ್ದರು. 1982ರಲ್ಲಿ ಅಂದಿನ ಸಚಿವರಾಗಿದ್ದ ಬಿ.ರಾಚಯ್ಯನವರ ಕಾಲದಲ್ಲಿ ಸಾಗುವಳಿ ಚೀಟಿಯನ್ನು ನೀಡಿದ್ದರು. ಇದೇ ಕಾರಣಕ್ಕೆ ಪ್ರತಿ ವರ್ಷವೂ ಮಹರಾಜರ ಭಾವಚಿತ್ರವನ್ನು ಮೆರವಣಿಗೆ ಮಾಡಿ ಅವರ ಜನ್ಮ ದಿನವನ್ನು ಗ್ರಾಮಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ.

ಆದರೆ ರಾಜಮಾತೆ ಪ್ರಮೋದದೇವಿಯವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು. ಇದರಿಂದ ಗ್ರಾಮಸ್ಥರಿಗೆ ಊರನ್ನೇ ಖಾಲಿ ಮಾಡಬೇಕಾಗುತ್ತದೆ ಎಂಬ ಭಯ ಆವರಿಸಿದೆ. ಈ ಕುರಿತು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದು. “ನಾವು ಇರೋದಾದರೆ ಇಲ್ಲೇ ಇರುತ್ತೇವೆ, ಸಾಯುವುದಾದರೆ ಇಲ್ಲೇ ಸಾಯುತ್ತೇವೆ, ಆದರೆ ಊರನ್ನು ಖಾಲಿ ಮಾಡಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳು ಖಾತೆ ಮಾಡಿಕೊಟ್ಟರೆ, ಇಡೀ ಗ್ರಾಮದ ಜನರು ಮೈಸೂರು ಅರಮನೆಗೆ ಹೋಗುತ್ತೇವೆ. ಅವರೇ ನಮಗೆ ಹಿಟ್ಟು ಬಟ್ಟೆ ಕೊಟ್ಟು ಸಾಕಲಿ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ :ಯತ್ನಾಳ್​ ತಲೆ ಕತ್ತರಿಸಬೇಕು; ಪ್ರಚೋದನಕಾರಿ ಆಡಿಯೋ ಹರಿಬಿಟ್ಟ ಕಿಡಿಗೇಡಿ 

ಇನ್ನು ಚಾಮರಾಜನಗರದ ತಾಲ್ಲೂಕಿನ ವಿವಿಧೆಡೆ 4500 ಸಾವಿರ ಎಕರೆಗೂ ಹೆಚ್ಚು ಮೈಸೂರು ಮಹರಾಜರ ಪತ್ರವಿದ್ದು. ಇದೇ ವ್ಯಾಪ್ತಿಯಲ್ಲಿ ಸಿದ್ದಯ್ಯನಪುರ ಗ್ರಾಮವೂ ಇದೆ. ಇಷ್ಟು ಸ್ವತ್ತಿನ ಖಾತೆಗಾಗಿ ಪ್ರಮೋದದೇವಿ ಪತ್ರ ಬರೆದಿದ್ದಾರೆ. ಮೈಸೂರು ಮಹಾರಾಜರು ಹಾಗು ಭಾರತ ಸರ್ಕಾರದ ನಡುವೆ ಆಗಿರುವ ಒಪ್ಪಂದದ ಪ್ರಕಾರ 4500 ಎಕರೆಗು ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಪ್ರಮೋದಾದೇವಿ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES