Wednesday, April 16, 2025

ಸ್ವಾಮೀಜಿಗಳು ಯತ್ನಾಳ್​ ಜೊತೆ ಚುನಾವಣೆಗೆ ನಿಲ್ಲಲಿದ್ದಾರೆ; ವಿಜಯಾನಂದ ಕಾಶಪ್ಪನವರ್​

ಹುಬ್ಬಳ್ಳಿ : ಶಾಸಕ ವಿಜಯನಂದ ಕಾಶಪ್ಪನವರ್​ ಮತ್ತೊಮ್ಮೆ ಜಯಮೃತ್ಯುಂಜಯ ಸ್ವಾಮೀಜಿಗಳ ವಿರುದ್ದ ಹರಿಹಾಯ್ದಿದ್ದು. ಸ್ವಾಮೀಜಿಗಳು ಬರುವ ದಿನಗಳಲ್ಲಿ ಯತ್ನಾಳ್​ ಜೊತೆ ಸೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅದಕ್ಕೆ ಅವರು ಯತ್ನಾಳ್​ ಬೆನ್ನು ಬಿದ್ದಿದ್ದಾರೆ ಎಂದು ಹೇಳಿದರು.

ಜಯಮೃತ್ಯುಂಜಯ ಸ್ವಾಮೀಜಿಗಳ ಬಗ್ಗೆ ಮಾತನಾಡಿದ ಶಾಸಕ ವಿಜಯನಂದ ಕಾಶಪ್ಪನವರ್ ” ಸ್ವಾಮೀಜಿಗಳಿಗೆ ಖಾವಿ ಬೇಡವಾಗಿದೆ, ಖಾದಿ ಬೇಕಾಗಿದೆ. ಅದಕ್ಕೆ ಅವರು ಯತ್ನಾಳ್ ಹಿಂದೆ ಬಿದ್ದಿದ್ದಾರೆ. ಬರುವ ದಿನಗಳಲ್ಲಿ ಯತ್ನಾಳ್​ ಜೊತೆ ಲೋಕಸಭ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹೀಗಾಗಿ ಅವರು ಬೆನ್ನು ಬಿದ್ದಿದ್ದಾರೆ. ಸ್ವಾಮೀಜಿಯವರು ಒಬ್ಬ ವ್ಯಕ್ತಿಯ ಹಿಂದೆ ಹೋಗೋದು ಸರಿಯಲ್ಲ. ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಸ್ವಾಮೀಜಿಗಳನ್ನು ನೇಮಿಸಿಲ್ಲ. ಗುರುಗಳಾದರು ಎಲ್ಲರನ್ನು ಸಮಾನವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ :ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿತ

ಮುಂದುವರಿದು ಮಾತನಾಡಿದ ಶಾಸಕ ಕಾಶಪ್ಪನವರ್​ ‘ಸ್ವಾಮಿಜಿಗಳ ಉಚ್ಚಾಟನೆ ಕುರಿತು ಕೂಡಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಲ್ಲರಿಗೂ ಸೇರಿದ್ದು
ಪ್ರಭಣ್ಣ ಹುಣಸಿಕಟ್ಟಿ ಅವರ ತೇಜೋವಧೆ ಮಾಡಲಾಗಿದೆ.  ಯತ್ನಾಳ್ ಹಂದಿ ನಾಯಿ ನರಿ ಅಂತ ಪದ ಬಳಕೆ ಮಾಡ್ತಾರೆ. ಇಂತಹ ಸಂಸ್ಕೃತಿ ಕಾರಣಕ್ಕೆ ಅವರ ಪಕ್ಷದವರು ಉಚ್ಚಾಟನೆ ಮಾಡಿದ್ದಾರೆ. ಯತ್ನಾಳ್ ಸ್ವಯಂ ಘೋಷಿತ ನಾಯಕ, ನಾನೇ ಸಿಎಂ ಅಂತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ಆದರೆ ಗುರುಗಳು ಅದೇ ರೀತಿ ನಡೆಯುತ್ತಿದ್ದಾರೆ. ವೈಯಕ್ತಿಕವಾಗಿ ಬಿಂಬಿಸುವ ಕೆಲಸ ಗುರುಗಳಿಂದ ನಡೆಯುತ್ತಿದೆ
ಯತ್ನಾಳ್ ಮಾತೆತ್ತಿದರೆ ತಾಕತ್ತು ದಮ್ಮು ಬಗ್ಗೆ ಮಾತನಾಡುತ್ತಾರೆ. ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ಜನರೇ ಇವರ ಹಣೆಬರಹ ಬರೆಯುತ್ತಾರೆ. ಸ್ವಾಮೀಜಿಗಳು ತಮ್ಮ ನಡೆಯನ್ನು ಬದಲಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಒಂದು ವಾರದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸುತ್ತೇವೆ. ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ವಿಜಯನಂದ ಕಾಶಪ್ಪನವರ್ ಹೇಳಿದರು.

RELATED ARTICLES

Related Articles

TRENDING ARTICLES