ಬೆಂಗಳೂರು : ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯುವ ಜೋಡಿಗಳು ಅಸಭ್ಯವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು. ಬೆಂಗಳೂರಿನ ಮೆಟ್ರೋ ನಿಲ್ದಾಣದ ಪ್ಲಾಟಫಾರ್ಮ್ 3ರಲ್ಲಿ ನಡೆದ ಘಟನೆ ಇದು ಎನ್ನಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಮಾದವರ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು. ಕರ್ನಾಟಕ ಪೋರ್ಟ್ಪೊಲೀಯೋ ಎಂಬ ಎಕ್ಷ್ ಖಾತೆಯಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇಂತಹ ಘಟನೆಗಳನ್ನು ನಾವು ಕೇವಲ ಡೆಲ್ಲಿ ಮೆಟ್ರೋದಲ್ಲಿ ಕಾಣುತ್ತಿದ್ದೆವೂ, ಆದರೆ ಬೆಂಗಳೂರು ಮೆಟ್ರೋ ಕೂಡ ಇದಕ್ಕೆ ಹೊರತಾಗಿಲ್ಲ ಎಂಬ ಸಂದೇಶ ನೀಡುವ ವಿಡಿಯೋ ವೈರಲ್ ಆಗಿದೆ. ಅಕ್ಕಪಕ್ಕದಲ್ಲಿ ಪ್ರಯಾಣಿಕರು, ಮಹಿಳೆಯರು ಓಡಾಡುತ್ತಿದ್ದರು ಲಜ್ಜೆಗೆಟ್ಟ ಯುವ ಜೋಡಿಗಳಿಬ್ಬರು ಮೆಟ್ರೋ ನಿಲ್ದಾಣದಲ್ಲೇ ರೊಮ್ಯಾನ್ಸ್ ಮಾಡಿದ್ದಾರೆ. ಇದೀಗ ಇದಕ್ಕೆ ನೆಟ್ಟಿಗರು ಸಾಕಷ್ಟು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇದನ್ನೂ ಓದಿ :ವೃತ್ತ ಬರೆದು, ಕನ್ನಡಿಗರು ನನ್ನ ಹೃದಯದಲ್ಲಿದ್ದಾರೆ ಎಂದ ಕನ್ನಡಿಗ ರಾಹುಲ್
ಎಕ್ಷ್ ಪೋಸ್ಟ್ಲ್ಲಿ ಏನಿದೆ..?
‘ಕರ್ನಾಟಕ ಪೋರ್ಟ್ಫೋಲಿಯೋ’ ಎಂಬ ಎಕ್ಸ್ ಖಾತೆಯಿಂದ ಈ ವಿಡಿಯೋ ವೈರಲ್ ಆಗಿದ್ದು. ಯುವ ಜೋಡಿಗಳ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈ ಘಟನೆಯು ಬೆಂಗಳೂರಿನಲ್ಲಿ ಸಭ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದನ್ನು ನೋಡುವುದು ಅತ್ಯಂತ ನಿರಾಶಾದಾಯಕ ಮತ್ತು ಕಳವಳಕಾರಿಯಾಗಿದೆ. ಮಾದಾವರ ಬಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯು ಅನೇಕರನ್ನು ಆಘಾತಗೊಳಿಸಿದೆ ಮತ್ತು ಮುಜುಗರಕ್ಕೀಡು ಮಾಡಿದೆ.
ಒಬ್ಬ ಯುವಕ ತನ್ನ ಗೆಳತಿಯೊಂದಿಗೆ ಅತ್ಯಂತ ಅನುಚಿತ ವರ್ತನೆಯಲ್ಲಿ ತೊಡಗಿದ್ದಾನೆ. ಅವಳೊಂದಿಗೆ ಮೆಟ್ರೋಗೆ ಕಾಯುತ್ತಿದ್ದಾಗ ಆಕೆಯ ದಿರಿಸಿನೊಳಗೆ ಕೈಹಾಕಿ ಅಸಭ್ಯ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ. ಇದು ವೈಯಕ್ತಿಕ ವಿಷಯವೇ ಆಗಿದ್ದರೂ, ವಾತ್ಸಲ್ಯ ಮತ್ತು ಅಸಭ್ಯತೆಯ ನಡುವೆ ಸ್ಪಷ್ಟವಾದ ಗೆರೆ ಅಥವಾ ವ್ಯತ್ಯಾಸ ಇದೆ. ಸಾರ್ವಜನಿಕ ಸಾರಿಗೆಗಾಗಿ ಉದ್ದೇಶಿಸಲಾದ ಜಾಗದಲ್ಲಿ ಆ ಗೆರೆಯನ್ನು ಎಂದಿಗೂ ದಾಟಬಾರದು.
ಇದನ್ನೂ ಓದಿ :42ನೇ ವಯಸ್ಸಿನಲ್ಲಿ PUC ಪರೀಕ್ಷೆ ಪಾಸ್ ಮಾಡಿ ಮಾದರಿಯಾದ ಗೃಹಿಣಿ
ಇನ್ನೂ ಹೆಚ್ಚು ನಿರಾಶಾದಾಯಕ ವಿಷಯವೆಂದರೆ, ಕೆಲವು ಯುವತಿಯರು ತಮ್ಮ ಸಂಗಾತಿಗಳಿಂದ ಅಂತಹ ನಡವಳಿಕೆಯನ್ನು ಸಹಿಸಿಕೊಳ್ಳುವ ಅಥವಾ ಪ್ರೋತ್ಸಾಹಿಸುವ ಮನೋಭಾವ ಕಾಣಿಸುತ್ತಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂಬಂತೆ ವರ್ತಿಸುತ್ತಾರೆ. ಇದು ಧೈರ್ಯ ಅಥವಾ ಸ್ವಾತಂತ್ರ್ಯವಲ್ಲ – ಇದು ನಿರ್ಲಕ್ಷ್ಯ, ಅಗೌರವ ಮತ್ತು ಸಾಮಾಜಿಕ ಅರಿವಿನ ಕೊರತೆ ಎಂದು ‘ಕರ್ನಾಟಕ ಪೋರ್ಟ್ಫೋಲಿಯೋ’ ಎಕ್ಸ್ ಹ್ಯಾಂಡಲ್ ಸಂದೇಶದಲ್ಲಿ ಬರೆಯಲಾಗಿದೆ.