Monday, April 14, 2025

RCB ಅಂದ್ರೆ ನಮ್​ ಜೀವ, ನಮ್​ ಪ್ರಾಣ; ಆರ್​​ಸಿಬಿ ಗುಣಗಾನ ಮಾಡಿದ ಶಿವಣ್ಣ

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಆರ್​ಸಿಬಿ ತಂಡದ ಗುಣಗಾನ ಮಾಡಿರುವ ವಿಡಿಯೋವೊಂದನ್ನು ಆರ್​ಸಿಬಿ ಎಕ್ಷ್​ ಅಕೌಂಟ್​ನಲ್ಲಿ ಪೋಸ್ಟ್​ ಮಾಡಿದ್ದು. ಈ ವಿಡಿಯೋದಲ್ಲಿ ಆರ್​ಸಿಬಿ ತಂಡದ ಬಗ್ಗೆ ಶಿವಣ್ಣ ಗುಣಗಾನ ಮಾಡಿದ್ದಾರೆ. RCB ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಎಂದು ಶಿವಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ.

ಈ ವಿಡಿಯೋವೊಂದನ್ನು ಸೋಶಿಯಲ್​ ಮಿಡಿಯಾದಲ್ಲಿ ಹಂಚಿಕೊಂಡಿದ್ದು. ಇದರಲ್ಲಿ ಮಾತನಾಡಿರುವ ಶಿವಣ್ ” ಐಪಿಎಲ್ ಪ್ರಾರಂಭವಾಗಿ ಇದೀಗ ಹದಿನೆಂಟು ವರ್ಷ. ಈ 18 ವರ್ಷಗಳಲ್ಲಿ ಆರ್‌ಸಿಬಿ ಹೇಗೇ ಆಡಲಿ ನಾವು ಬೆಂಬಲಿಸಿದ್ದೇವೆ. ಆರ್‌ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಬರುತ್ತದೆ. ಅದೇನೋ ಗೊತ್ತಿಲ್ಲ ಆರ್‌ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದಿದ್ದಾರೆ.

ಇದನ್ನೂ ಓದಿ :ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದ ಬಲ್ಡೋಟ ಕಾರ್ಖಾನೆಗೆ ಕೇಂದ್ರ ಸರ್ಕಾರದಿಂದ ಗ್ರೀನ್​​ ಸಿಗ್ನಲ್​

ಬೆಂಗಳೂರನ್ನು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಆರ್​ಸಿಬಿ ತಂಡ ಪ್ರತಿನಿಧಿಸುತ್ತದೆ. ಮತ್ತೆ ಆರ್‌ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್‌ನಲ್ಲಿ ಆಡುತ್ತಾರೆ. ಹೀಗಾಗಿ 18ನೇ ಸೀಸನ್‌ನಲ್ಲಿ ಆರ್‌ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಹೋಗಿ ಮ್ಯಾಚ್ ಅನ್ನು ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಶಿವಣ್ಣ ಕರೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES