ಚೆನ್ನೈ : ತಮಿಳುನಾಡು ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರು ನೇಮಕವಾಗಿದ್ದು. ಈ ಸ್ಥಾನಕ್ಕೆ ಬಿಜೆಪಿಯ ತಿರುನಲ್ವೇಲಿ ಶಾಸಕ ನೈನರ್ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಿಂದ ನಾಮಪತ್ರವನ್ನು ಸಲ್ಲಿಸಲು ಆಹ್ವಾನಿಸಲಾಗಿತ್ತು. ಆದರೆ ನೈನರ್ ನಾಗೇಂದ್ರನ ಹೊರತಾಗಿ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನಲೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು. ಅಂತಿಮ ಘೋಷಣೆಯೊಂದೆ ಬಾಕಿಯಿದೆ.
ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಬಿಜೆಪಿಯ ಇತರ ನಾಯಕರು ಅದನ್ನು ಅನುಮೋದಿಸಿದರು. ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಅಧಿಕೃತ ಘೋಷಣೆಯನ್ನು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಿಂದ ಮಾಡಲಾಗುವುದು. ಈ ಹುದ್ದೆಗೆ ವನತಿ ಶ್ರೀನಿವಾಸನ್ ಮತ್ತು ತಮಿಳಿಸೈ ಸೌಂದರರಾಜನ್ ಅವರಂತಹ ಹೆಸರುಗಳ ಬಗ್ಗೆ ಊಹಾಪೋಹಗಳಿದ್ದರೂ ಅಂತಿಮವಾಗಿ ನಾಗೇಂದ್ರನ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ :ಅಹಿಂಸ ಮಾರ್ಗ ಸಾರಿದ ಶ್ರವಣಬೆಳಗೊಳದಲ್ಲಿ ಜೈನಮುನಿಗಳನ್ನು ಸ್ವಾಗತಿಸುತ್ತಿವೆ ಮಾಂಸದ ಅಂಗಡಿಗಳು
ನೈನರ್ ನಾಗೇಂದ್ರನ ಹಿನ್ನಲೆ..!
ನೈನರ್ ನಾಗೇಂದ್ರ ತಿರುನಲ್ವೇಲಿಯ ಶಾಸಕರಾಗಿದ್ದು. ತಮಿಳುನಾಡಿನ ಪ್ರಬಲ ಸಮುದಾಯವಾದ ತೇವರ್ ಸಮುದಾಯದ ನಾಯಕರಾಗಿದ್ದಾರೆ. ಇವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡ ಒಲವು ಹೊಂದಿತ್ತು ಎಂದು ಬಹು ಮೂಲಗಳು ದೃಢಪಡಿಸಿವೆ.
ನೈನಾರ್ ನಾಗೇಂದ್ರನ್ ಅವರು ಎಐಎಡಿಎಂಕೆಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2017ರಲ್ಲಿ ಎಐಎಡಿಎಂಕೆಯಿಂದ ಹೊರಬಂದು ಬಿಜೆಪಿ ಸೇರಿದರು. 2019ರಲ್ಲಿ ಅವರು ಬಿಜೆಪಿ ಪರವಾಗಿ ರಾಮನಾಥಪುರಂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 2021ರ ವಿಧಾನಸಭಾ ಚುನಾವಣೆಯಲ್ಲಿ ತಿರುನಲ್ವೇಲಿ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದರು. ಶಾಸಕರಾಗಿದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ ತಿರುನಲ್ವೇಲಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಅಲ್ಲಿ ಅವರು ಗೆಲ್ಲಲಿಲ್ಲ.