ಆಂದ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಬಗ್ಗೆ ಚಿರಂಜೀವಿ ಮಾಹಿತಿ ಹಂಚಿಕೊಂಡಿದ್ದು. ಶಂಕರ್ಗೆ ಚಿಕಿತ್ಸೆ ಮುಂದುವರಿದಿದ್ದು. ಶಂಕರ್ ಸದ್ಯ ವಿಶ್ರಾಂತಿಯಲ್ಲಿದ್ದಾನೆ. ಶೀಘ್ರದಲ್ಲೆ ಆತ ಗುಣಮುಖನಾಗಲಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಏಪ್ರೀಲ್ 08ರಂದು ಸಿಂಗಪುರದ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿ ನಟ ಪವನ್ ಕಲ್ಯಾಣ ಪುತ್ರ ಗಂಭೀರ ಗಾಯಗೊಂಡಿದ್ದನು. ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮಾರ್ಕ್ ಶಂಕರ್‌ನನ್ನು ನೋಡಲು ಪವನ್ ಕಲ್ಯಾಣ್ ಜೊತೆ ಚಿರಂಜೀವಿ ದಂಪತಿ ಸಿಂಗಾಪುರಕ್ಕೆ ಹೋಗಿದ್ದರು. ಈ ಬೆನ್ನಲ್ಲೇ ಪವನ್ ಪುತ್ರನ ಆರೋಗ್ಯ ಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಿರಂಜೀವಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ :ವಾರಣಾಸಿ ಗ್ಯಾಂಗ್ ರೇಪ್: ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ
“ನಮ್ಮ ಮಗ ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ. ಆದರೆ ಅವನು ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ನಮ್ಮ ಕುಲದೇವರಾದ ಆಂಜನೇಯನ ಕೃಪೆ ಮತ್ತು ಕರುಣೆಯಿಂದ, ಮಾರ್ಕ್ ಶಂಕರ್ ಶೀಘ್ರದಲ್ಲೇ ಸಂಪೂರ್ಣ ಗುಣವಾಗಿ, ಮೊದಲಿನಂತೆ ಆಗಲಿದ್ದಾನೆ. ಹನುಮಾನ್ ಜಯಂತಿಯಂದು (ಏ.11) ಆ ಪುಟ್ಟ ಮಗುವನ್ನು ದೊಡ್ಡ ಅಪಾಯ, ದುರಂತದಿಂದ ರಕ್ಷಿಸುವ ಮೂಲಕ ಆ ದೇವರು ನಮ್ಮೊಂದಿಗೆ ನಿಂತಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ನಮ್ಮ ಕುಟುಂಬದ ಬೆಂಬಲಕ್ಕೆ ನಿಂತು, ಮಾರ್ಕ್ ಶಂಕರ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಎಲ್ಲರೂ ನಮ್ಮ ಮಗುವಿಗಾಗಿ ಪ್ರಾರ್ಥಿಸುತ್ತಿದ್ದಾರೆ, ಆಶೀರ್ವಾದಗಳನ್ನು ನೀಡುತ್ತಿದ್ದಾರೆ. ನನ್ನ ಪರವಾಗಿ, ನನ್ನ ಕಿರಿಯ ಸಹೋದರ ಪವನ್ ಕಲ್ಯಾಣ್ ಪರವಾಗಿ, ನಮ್ಮ ಇಡೀ ಕುಟುಂಬದ ಪರವಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ಚಿರಂಜೀವಿ ತಿಳಿಸಿದ್ದಾರೆ.