Monday, April 14, 2025

ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದ ಬಲ್ಡೋಟ ಕಾರ್ಖಾನೆಗೆ ಕೇಂದ್ರ ಸರ್ಕಾರದಿಂದ ಗ್ರೀನ್​​ ಸಿಗ್ನಲ್​

ಕೊಪ್ಪಳ : ಸಾರ್ವಜನಿಕರ ತೀವ್ರ ವಿರೋಧದ ನಡುವೆ ಬಲ್ಡೋಟ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಶಾಸಕರು ಹಾಗೂ ಸಚಿವರು ಸಹ ಬಲ್ಡೋಟ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಹೋರಾಟ ನಡಸಿದ್ದರು. ಆದರೆ ಸದ್ಯ ಕೇಂದ್ರ ಪರಿಸರ ಇಲಾಖೆ ಅನುಮತಿ ಪತ್ರ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಬಲ್ಡೋಟ ಕಂಪನಿಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಕೊಪ್ಪಳ ನಗರದ ಸಮೀಪವೇ ನಿರ್ಮಿಸಲು ಮುಂದಾಗಿತ್ತು. ಕಾರ್ಖಾನೆ ಸ್ಥಾಪನೆಯಿಂದ ನಗರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಸಂಪೂರ್ಣ ಹದಿಗಡಲಿದೆ. ಈಗಾಗಿ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಖುದ್ದು ಕೊಪ್ಪಳ ಗವಿಮಠದ ಗವೀಶ್ರೀ ಗಳು ಸಹ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಕಾರ್ಖಾನೆ ವಿರುದ್ಧ ಹೋರಟದ ನೇತೃತ್ವವನ್ನು ವಹಿಸಿದ್ದರು. ಹೋರಾಟದಲ್ಲಿ ಕೊಪ್ಪಳ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ,ಜನಾರ್ಧನ ರೆಡ್ಡಿ, ಸೇರಿದಂತೆ‌ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಿದ್ದರು.

ಇದನ್ನೂ ಓದಿ :ಸ್ವಾಮೀಜಿಗಳು ಯತ್ನಾಳ್​ ಜೊತೆ ಚುನಾವಣೆಗೆ ನಿಲ್ಲಲಿದ್ದಾರೆ; ವಿಜಯಾನಂದ ಕಾಶಪ್ಪನವರ್​

ಕೊಪ್ಪಳ ಜನರ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೇತೃತ್ವದ ಸಮಿತಿ ಸಿಎಂ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದರು. ಇನ್ನೂ ಮನವಿಯನ್ನು ಆಲಿಸಿದ ಸಿದ್ದು ಕೂಡಲೇ ಕಾರ್ಖಾನೆ ಸ್ಥಾಪನೆಗೆ ಕಾರ್ಯ ಸ್ಥಗಿತಗೊಳಿಸಲು ಫೋನ್ ನಲ್ಲಿಯೇ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಆದೇಶ ಮಾಡಿದ್ದರು. ಅಲ್ಲಿಗೆ ಕಾರ್ಖಾನೆ ಸ್ಥಾಪನೆ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ಇದೀಗ ಕೇಂದ್ರ ಪರಿಸರ ಇಲಾಖೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿದ್ದು ಹೋರಾಟಗಾರರನ್ನು ದಿಕ್ಕು ತಪ್ಪಿಸಿದೆ.

ಬಲ್ಡೋಟ ಉಕ್ಕು ಉತ್ಪಾದನೆ ಕಾರ್ಖಾನೆಗೆ, ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಗ್ರೀನ್ ಸಿಗ್ನಲ್ ನೀಡಿದೆ ಎಂದು  ಪತ್ರಿಕಾ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆರಂಭಿಕವಾಗಿ ವಾರ್ಷಿಕ 3.5 (ಮೂರವರೆ ಕೋಟಿ ಮೆಟ್ರಿಕ್ ಟನ್) ಉಕ್ಕು ಉತ್ಪಾದನೆಗೆ ಕೇಂದ್ರದ ಅನುಮತಿ ಪಡೆಯುವಲ್ಲಿ ಬಲ್ಡೋಟ ಸಮೂಹ ಸಂಸ್ಥೆ ಯಶಸ್ವಿಯಾಗಿದೆ ಎಂದು ಸಂಸ್ಥೆಯ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ನ ಉಪಾಧ್ಯಕ್ಷ ನಾಗರಾಜ್.ಎನ್ ಬಿ ಮಾದ್ಯಮಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ :ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿತ

ಮೊದಲ ವರ್ಷದಲ್ಲಿ 3.5 ಮೆಟ್ರಿಕ್ ಟನ್ ನಿಂದ ಆರಂಭವಾಗಲಿದೆ. ಮುಂದಿನ ಐದು ವರ್ಷಗಳಲ್ಲಿ, ಉಕ್ಕು ಉತ್ಪಾದನಾ ಸಾಮರ್ಥ್ಯ 10.5 ಕೋಟಿ ಮೆಟ್ರಿಕ್ ಟನ್‌ಗೆ ಹೆಚ್ಚಿಸುವುದು ಸಂಸ್ಥೆಯ ಗುರಿ ಎಂದು ಹೇಳಿಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಸಾರ್ವಜನಿಕ ವಲಯದ ಕೆಲವು ವರ್ಗಗಳು ಯೋಜನೆಯಿಂದ ಪರಿಸರದ ಮೇಲೆ ಉಂಟಾಗುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಎಂದು ಪ್ರಸ್ತಾಪಿಸಿರುವ ನಾಗರಾಜ್, ಈ ಹಿನ್ನೆಲೆ ಪರಿಸರದ ಮೇಲೆ ಪ್ರಭಾವ ಬೀರುವಂತಹ ವಿಷಯಗಳ ಮೌಲ್ಯಮಾಪನವನ್ನು ಕಂಪನಿ ನಡೆಸಿದೆ. ಈ ಕುರಿತ ವರದಿಯನ್ನೂ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ.. ಸಾಕಷ್ಟು ವಿರೋಧದ ನಡುವೆ ಬಲ್ಡೋಟ ಸಮೂಹ ಸಂಸ್ಥೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯ ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದಾರೆ. ಕೊಪ್ಪಳದಲ್ಲಿ ಬಲ್ಡೋಟ ಕಾರ್ಖಾನೆ ಸ್ಥಾಪನೆ ಆಗುತ್ತಾ ಇಲ್ವಾ ಅನ್ನೊದರ ಕುರಿತು ಸಾರ್ವಜನಿಕವಲಯದಲ್ಲಿ ಗೊಂದಲ ಸೃಷ್ಟಿಯಾಗಿದೆ.

 

RELATED ARTICLES

Related Articles

TRENDING ARTICLES