ಹಾಸನ : ಜಿಲ್ಲೆಯ ಶಾಂತಿಗ್ರಾಮ ಪೊಲೀಸ್ ತರಬೇತಿ ಶಾಲೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಭೇಟಿ ನೀಡಿದ್ದು. ಸರಿಯಾಗಿ ಡ್ರಿಲ್ ಮಾಡಲು ಬರದ ತರಬೇತಿ ಶಿಬಿರಾರ್ಥಿಗಳ ವಿರುದ್ದ ಗರಂ ಆಗಿದ್ದಾರೆ.
ಹಾಸನದ ಪೊಲೀಸ್ ತರಬೇತಿ ಶಾಲೆಗೆ ಭೇಟಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್ ತರಬೇತಿಗೆ ಎಂದು ಬಂದಿದ್ದ ನೂತನ ಶಿಬಿರಾರ್ಥಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮದ ಮಧ್ಯೆ ಪೊಲೀಸ್ ಮಾರ್ಚ್ ಡ್ರಿಲ್ ಪರೀಕ್ಷಿಸಿದ ಎಡಿಜಿಪಿ ಅಲೋಕ್ ಕುಮಾರ್. ಸರಿಯಾಗಿ ತರಬೇತಿ ಪಡೆಯದ ಟ್ರೈನಿ ಪೊಲೀಸರ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಚಲಿಸುತ್ತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ; ಏಪೋರ್ಟ್ ಸಿಬ್ಬಂದಿ ಗಾಯ
ಈ ಕುರಿತು ಮಾತನಾಡಿದ ಅಲೋಕ್ ಕುಮಾರ್ “ಬೇರೆ ರಾಜ್ಯದಲ್ಲಿ ತರಬೇತಿ ಶಿಬಿರಾರ್ಥಿಗಳಿಗೆ ಕೇವಲ ಭತ್ಯೆ ನೀಡುತ್ತಿದ್ದಾರೆ, ಕರ್ನಾಟಕ ಸರ್ಕಾರ ಟ್ರೈನೀ ಪೊಲೀಸ್‌ರನ್ನ ಒಳ್ಳೆರೀತಿ ನೋಡ್ಕೊತಿದ್ದಾರೆ. ನಿಮಗೆ 54 ಸಾವಿರ ಸಂಬಳ ಕೇವಲ ಟ್ರೈನಿಂಗ್ ಸಮಯದಲ್ಲಿ ನೀಡುತ್ತಿದ್ದಾರೆ. ಆದರೆ ನಿಮಗೆ ಸರಿಯಾಗಿ ಒಂದು ಡ್ರಿಲ್ ಮಾಡೋಕೆ ಬರುತ್ತಿಲ್ಲ. ಇಲ್ಲಿ ನಿಮಗೆ ಆಡೋಕೆ, ಓಡೋಕೆ, ಓದೋಕೆ ಎಂದು ಸಂಬಳ ಕೊಡ್ತಿದ್ದಾರೆ ಎಂದು ಗರಂ ಆದರು.
ಸ್ವತಃ ತಾವೇ ಡ್ರಿಲ್ ಕಾಷನ್ ನೀಡಿದ ಅಲೋಕ್ ಕುಮಾರ್ “ಒಂದು ಅಟೆನ್ಷನ್ ಮಾಡೋಕೆ ಬರಲ್ಲ, ನಿಮ್ಮ ಮೇಲೆ ಕ್ರಮ ಮಾಡಬೇಕು. ಮೂರು ತಿಂಗಳು ಟ್ರೈನಿಂಗ್ ಆಯ್ತು ನಿಮಗೆ ಇನ್ನು ಡ್ರಿಲ್ ಬರಲ್ಲ ಎಂದು ರೇಗಾಡಿದರು. ನಂತರ ಅಧಿಕಾರಿಗಳುಗೆ ಸರಿಯಾಗಿ ತರಬೇತಿ ಪಡೆಯದಿದ್ದರೆ ಯಾರಿಗೂ ಔಟ್ ಪಾಸ್ ಕೊಡಬೇಡಿ ಎಂದು ಆದೇಶ ನೀಡಿದರು.