Friday, April 18, 2025

ನಾಯಿ ಕಚ್ಚಿದೆ ಎಂದು ಆಸ್ಪತ್ರೆಗೆ ಹೋದ ಮಹಿಳೆ ಕಣ್ಣಿಗೆ ಚಿಕಿತ್ಸೆ ನೀಡಿದ ವೈದ್ಯರು

ರಾಯಚೂರು : ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಿದ್ದ ಮಹಿಳೆಯ ಕಣ್ಣಿಗೆ ವೈದ್ಯರು ಚಿಕಿತ್ಸೆ ನೀಡಿದ್ದು. ವೈದ್ಯರ ಎಡವಟ್ಟಿನಿಂದ ಮಹಿಳೆ ಕಣ್ಣನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.

ರಾಯಚೂರಿನ ರಿಮ್ಸ್​ ಆಸ್ಪತ್ರೆ ವೈದ್ಯರು ಈ ಎಡವಟ್ಟು ಮಾಡಿಕೊಂಡಿದ್ದು. ರಾಯಚೂರು ನಗರದ ಬೇರೊನ್ ಕಿಲ್ಲಾ ಬಡಾವಣೆ ನಿವಾಸಿ ರಾಚಮ್ಮ(೪೫) ಎಂಬ ಮಹಿಳೆಯ ಕೈಗೆ ನಾಯಿ ಕಚ್ಚಿತ್ತು. ಇದಕ್ಕೆ ಚಿಕಿತ್ಸೆ ಪಡೆಯಲು ಎಂದು ಮಹಿಳೆ ರಿಮ್ಸ್​ ಆಸ್ಪತ್ರೆಗೆ ಬಂದಿದ್ದರು. ಆದರೆ ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಬೇಕಾದ ವೈದ್ಯರು ಮಹಿಳೆಯ ಕಣ್ಣಿಗೆ ಯಾವುದೋ ಡ್ರಾಪ್ಸ್​ ಹಾಕಿದ್ದಾರೆ.

ಇದನ್ನೂ ಓದಿ :ಹೆಲ್ಮಟ್​ ಹಾಕದೆ ಡೆಡ್ಲಿ ಡ್ರೈವ್​; ಮಕ್ಕಳ ಪ್ರಾಣಕ್ಕೆ ಕುತ್ತು ತಂದ ಮಹಿಳೆ

ವೈದ್ಯರ ಈ ಎಡವಟ್ಟಿನಿಂದ ಮಹಿಳೆಯ ಕಣ್ಣಿಗೆ ಇಂನ್​ಫೆಕ್ಚನ್​ ಆಗಿದ್ದು. ಮಹಿಳೆ ಕಣ್ಣನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿದು ಬಂದಿದೆ. ರಿಮ್ಸ್​ ಆಸ್ಪತ್ರೆಯ ವೈದ್ಯರ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು. ಘಟನೆ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ದೊರಕಬೇಕಿದೆ.

RELATED ARTICLES

Related Articles

TRENDING ARTICLES