Friday, April 18, 2025

ಬೆಂಗಳೂರು ಸುತ್ತಮುತ್ತ ಏರ್​ಪೋರ್ಟ್​ ಮಾಡಿದರೆ ಟ್ರಾಫಿಕ್​ ಹೆಚ್ಚಾಗುತ್ತೆ; ಸತೀಶ್​ ಜಾರಕಿಹೊಳಿ

ಬೆಂಗಳೂರು : ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ಏಪೋರ್ಟ್​ ನಿರ್ಮಾಣ ಮಾಡಲು ಈಗಾಗಲೇ ಸವೇ ಕಾರ್ಯಗಳು ಆರಂಭವಾಗಿದ್ದು. ಈ ಕುರಿತು ಸಚಿವ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಮತ್ತೊಂದು ಏರ್​ಪೋರ್ಟ್​ ನಿರ್ಮಾಣ ಮಾಡಿದರೆ ಟ್ರಾಫಿಕ್​ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಅದರ ಬದಲು ಶಿರಾ ಬಳಿ ಮಾಡಲಿ ಎಂದು ಹೇಳಿದರು.

ನಗರದ ಕನಕಪುರ, ಹಾರೋಹಳ್ಳಿ ಮತ್ತು ನೆಲಮಂಗಲದ ಬಳಿ ಎರಡನೇ ಏರ್​ಪೋರ್ಟ್ ನಿಲ್ದಾಣಕ್ಕೆ ಜಾಗ ಗುರುತಿಸಿದ್ದು. ಈ ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿ ಸುತ್ತಮುತ್ತ ಏರ್​ಪೋರ್ಟ್​ ನಿರ್ಮಾಣದ ಬದಲು ತುಮಕೂರಿನ ಶಿರಾ ಬಳಿ ಏರ್​ಪೋರ್ಟ್​ ನಿರ್ಮಾಣಕ್ಕೆ ಆಗ್ರಹ ಕೇಳಿ ಬಂದಿದೆ.

ಇದನ್ನೂ ಓದಿ :ಪೋಟೋಶೂಟ್ ಹೆಸರಲ್ಲಿ ಪ್ರೇಮ ಸಲ್ಲಾಪ; ಕೃಷ್ಣಮಠ ಆವರಣದಲ್ಲಿ ಪ್ರಿ ವೆಡ್ಡಿಂಗ್ ಶೂಟ್​​ಗೆ ಬ್ರೇಕ್​

ಈ ಕುರಿತು ಲೋಕೊಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು. “ಆರು ತಿಂಗಳ ಹಿಂದೆಯೇ ನಾನು ಲೆಟರ್ ಬರೆದಿದ್ದೆ. ಇವರೆಲ್ಲಾ ಈಗ ಪತ್ರ ಬರೆದಿದ್ದಾರೆ. ಶಿರಾ ಬಳಿ ಏರ್​ಪೋರ್ಟ್ ಮಾಡಿದರೆ ಹುಬ್ಬಳ್ಳಿ, ಬೆಳಗಾಂ, ಶಿವಮೊಗ್ಗ ಎಲ್ಲದಕ್ಕೂ ಹತ್ತಿರ ಆಗುತ್ತೆ. ಅದೇ ಸಿಟಿ ಬಳಿ ನಿರ್ಮಾಣ ಮಾಡಿದರೆ ಟ್ರಾಫಿಕ್ ಹೆಚ್ಚಾಗುತ್ತೆ. ಜೊತೆಗೆ ಶಿರಾ ಬಳಿ  ಸರ್ಕಾರಿ ಲ್ಯಾಂಡ್ ಇದೆ ಅಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗಲಿ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ ಮೂರು ಸ್ಥಳಗಳನ್ನು ವೀಕ್ಷಣೆ ಮಾಡಿದ್ದಾರೆ. ಅದರಲ್ಲಿ ಶಿರಾ ಇಲ್ಲ, ಅಂತಿಮವಾಗಿ ಎಲ್ಲಿ ಮಾಡಬೇಕು ಅಂತಾ ಎಎಐ(Airports Authority of India) ತೀರ್ಮಾನ ಮಾಡುತ್ತೆ. ಶಿರಾದಲ್ಲಿ ಆಗಲಿ ಅಂತಾ ಡಿಮ್ಯಾಂಡ್ ಇದೆ, ಜಯಚಂದ್ರ ಅವರದ್ದು ಕೂಡ ಡಿಮ್ಯಾಂಡ್ ಇದೆ. ಬೆಂಗಳೂರಿನಲ್ಲಿ ಏರ್​ಪೋರ್ಟ್ ಆದರೆ ಮತ್ತೆ ಬೆಂಗಳೂರಿಗೆ ಸಮಸ್ಯೆ ಆಗುತ್ತೆ. ಬೆಂಗಳೂರನ್ನ ಟ್ರಾಫಿಕ್​ ಮುಕ್ತ ಮಾಡಬೇಕು ಎಂಬುದು ನಮ್ಮ ಉದ್ದೇಶ. ಇದರ ಕುರಿತು ಸಿಎಂ ಮತ್ತಯ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಜೊತೆ ಚರ್ಚಿಸಿದ್ದೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES