Sunday, April 13, 2025

ರಕ್ಷಣೆ ನೀಡುವ ನೆಪದಲ್ಲಿ ಹಾವಿಗೆ ಹಿಂಸೆ; ಅಹೋರಾತ್ರನ ಅನಾಹುತಕ್ಕೆ ಜನರಿಂದ ಆಕ್ರೋಶ

ಬೆಂಗಳೂರು : ಸ್ಯಾಂಡಲ್​ವುಡ್​​ ನಟರ ವಿರುದ್ದ ನಾಲಿಗೆ ಹರಿಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದ ಅಹೋರಾತ್ರ ಮತ್ತೊಂದು ಅನಾಹುತ ಮಾಡಿಕೊಂಡಿದ್ದು. ಹಾವಿಗೆ ರಕ್ಷಣೆ ನೀಡುತ್ತೇನೆ ಎಂದು ಹಿಂಸೆ ನೀಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು. ಈತನ ಕೃತ್ಯ ಕಂಡ ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುವ ಅಹೋರಾತ್ರ ನಟೇಶಪೋಲೆಪಲ್ಲಿ ಎಂಬ ವ್ಯಕ್ತಿ ಹಾವಿಗೆ ಹಿಂಸೆ ನೀಡಿರುವ ವಿಡಿಯೋ ವೈರಲ್​ ಆಗಿದೆ. ರಕ್ಷಣೆ ನೆಪದಲ್ಲಿ ಹಾವಿಗೆ ಹಿಂಸೆ ನೀಡಿರುವ ಈ ವ್ಯಕ್ತಿ. ಹಾವನ್ನು ರಕ್ಷಿಸಿ ಕಾಡಿಗೆ ಬಿಡದೆ, ಕತ್ತಿಗೆ ಸುತ್ತಿಕೊಂಡು ಪೋಸ್​ ನೀಡಿದ್ದಾನೆ. ಶಿವಲಿಂಗವನ್ನು ಮುಂದೆ ಇಟ್ಟುಕೊಂಡು ಕತ್ತಿಗೆ ಹಾವನ್ನು ಸುತ್ತಿಕೊಂಡು ಧ್ಯಾನ ಮಾಡುತ್ತಿರುವ ರೀತಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ಇದನ್ನೂ ಓದಿ :ಸರಿಯಾಗಿ ಡ್ರಿಲ್​ ಮಾಡಲು ಬರದ ನಿಮಗೆ 54ಸಾವಿರ ಸಂಬಳ; ತರಬೇತಿ ಪೊಲೀಸರ ಮೇಲೆ ಅಲೋಕ್​ ಕುಮಾರ್​ ಗರಂ

ಅರಿಶಿಣ ಬಣ್ಣದ ಅಪರೂಪದ ಕೇರೆಹಾವು ಹಿಡಿದು ಹಿಂಸೆ ನೀಡಿದ್ದು. ಹಾವನ್ನ ಬಕೆಟ್ ನೀರಿನಲ್ಲಿ ಹಾಕಿ ಎಂಜಾಯ್ ಮಾಡು ಎಂದು ವಿಚಿತ್ರ ವರ್ತನೆ ತೋರಿಸಿದ್ದಾನೆ. ಸುಮಾರು 2 ಗಂಟೆಗಳ ಕಾಲ ಹಾವನ್ನು ನೀರಿನಲ್ಲಿ ಮುಳುಗಿಸಿ ಹಿಂಸಿಸಿದ್ದು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈತನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು. ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES