ನವ ದೆಹಲಿ : 26/11ರ ದಾಳಿಯ ಸಂಚುಕೋರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿದ್ದು. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು. ಮೋದಿ ಸರ್ಕಾರ ರಾಣಾ ಹಸ್ತಾಂತರದ ಕೀರ್ತಿಯನ್ನು ತೆಗೆದುಕೊಳ್ಳಲು ಯತ್ನಿಸುತ್ತಿದೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿನ ಶ್ರಮದಿಂದಾಗಿ ತಹವ್ವೂರ್ ರಾಣ ಭಾರತಕ್ಕೆ ಕರೆತರಲಾಗಿದೆ ಎಂದಿದ್ದಾರೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ ತಹವ್ವೂರ್ ರಾಣಾನನ್ನು ಅಮೇರಿಕಾದಿಂದ ಭಾರತಕ್ಕೆ ಎಳೆದು ತರಲಾಗಿದ್ದು. ಇದರ ಕೀರ್ತಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಪಿ, ಚಿದಂಬರಂ ಆರೋಪಿಸಿದ್ದಾರೆ. ಈ ಕುರಿತು ಹೇಳಿರುವ ಅವರು “ಒಂದು ದಶಕದ ಕಠಿಣ ರಾಜತಾಂತ್ರಿಕ, ಕಾನೂನು ಮತ್ತು ಗುಪ್ತಚರ ಪ್ರಯತ್ನಗಳ ಕಾರಣ ರಾಣ ಭಾರತಕ್ಕ ಹಸ್ತಾಂತರವಾಗಿದ್ದಾನೆ.ಇದನ್ನೂ ಓದಿ :ಋತುಮತಿಯಾಗಿದ್ದ ವಿದ್ಯಾರ್ಥಿನಿಯನ್ನು ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಶಿಕ್ಷಕರು
ಆದರೆ ಮೋದಿ ಸರ್ಕಾರವು ಇದರ ಕ್ರೆಡಿಟ್ ತೆಗೆದುಕೊಳ್ಳಲು ಆತುರಪಡುತ್ತಿದೆ, ಆದರೆ ಈ ಹಸ್ತಾಂತರವು ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ‘2009 ರ ನವೆಂಬರ್ 11 ರಂದು NIA ನವದೆಹಲಿಯಲ್ಲಿ ಡೇವಿಡ್ ಕೋಲ್ಮನ್ ಹೆಡ್ಲಿ (ಅಮೆರಿಕ ಪ್ರಜೆ), ತಹವ್ವೂರ್ ರಾಣಾ (ಕೆನಡಾ ಪ್ರಜೆ) ಮತ್ತು 26/11 ಪಿತೂರಿಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಪ್ರಕರಣ ದಾಖಲಿಸಿ ಪ್ರಕರಣಕ್ಕ ಅಡಿಪಾಯ ಹಾಕಿತ್ತು. ಇದನ್ನು ಮೆಚ್ಚಿದ್ದ ಕೆನಡಾ ವಿದೇಶಾಂಗ ಸಚಿವರು ಭಾರತದ ವಿದೇಶಾಂಗ ನೀತಿಗ ಧನ್ಯವಾದ ಹೇಳಿದ್ದರು.
2009ರಲ್ಲಿ ರಾಣನನ್ನು ಅಮೇರಿಕಾದಲ್ಲಿ ಭಯೋತ್ಪಾದನೆ ಸಂಚಿನ ಆರೋಪದ ಮೇಲೆ ಆತನನ್ನು ಬಂಧಿಸಲಾಯಿತು. ಆದರೆ 2011ರ ಜೂನ್ನಲ್ಲಿ ಅಮೆರಿಕಾ ನ್ಯಾಯಾಲಯ ಆತನನ್ನು ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಪ್ರಕರಣದಿಂದ ಖುಲಾಸೆಗೊಳಿಸಿತು. ಇತರೆ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆದರೆ ಯುಪಿಎ ಸರ್ಕಾರ ಈ ಪ್ರಕರಣದ ಒತ್ತಡವನ್ನು ರಾಜತಾಂತ್ರಿಕವಾಗಿ ಜೀವಂತವಾಗಿರಿಸಿತ್ತು.
ಇದನ್ನೂ ಓದಿ :ತಹವೂರ್ ರಾಣನ ಪೌರತ್ವ ರದ್ದುಗೊಳಿಸಿದ್ದೇವೆ, ಆತ ನಮ್ಮ ಪ್ರಜೆಯಲ್ಲ: ಪಾಕಿಸ್ತಾನ ವಿದೇಶಾಂಗ ಇಲಾಖೆ
ಯುಪಿಎ ಸರ್ಕಾರದ ಅಡಿಯಲ್ಲಿ ಪ್ರಾರಂಭವಾದ ಪ್ರಬುದ್ಧ, ಸ್ಥಿರ ಮತ್ತು ಕಾರ್ಯತಂತ್ರದ ರಾಜತಾಂತ್ರಿಕತೆಯ ಪರಿಣಾಮವಾಗಿ ರಾಣಾ ಭಾಋತಕ್ಕೆ ಹಸ್ತಾಂತರವಾಗಿದ್ದಾನೆ. ಮೋದಿ ಸರ್ಕಾರ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಿಲ್ಲ, ಈ ಪ್ರಕ್ರಿಯೆಯಲ್ಲಿ ಮೋದಿ ಸರ್ಕಾರ ಯಾವುದೇ ಹೊಸ ಪ್ರಗತಿಯನ್ನು ಸಾಧಿಸಲಿಲ್ಲ. ಆದರೆ ಈಗ ಈ ಕಾರ್ಯದ ಕೀರ್ತಿಯನ್ನು ಮೋದಿ ಸರ್ಕಾರ ಪಡೆದುಕೊಂಡಿದೆ.
ಈ ಹಸ್ತಾಂತರವು ಯಾವುದೇ ಮಹೋನ್ನತಿಯ ಫಲಿತಾಂಶವಲ್ಲ. ರಾಜತಾಂತ್ರಿಕತೆ, ಕಾನೂನು ಜಾರಿ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಪ್ರಾಮಾಣಿಕವಾಗಿ ಮತ್ತು ಯಾವುದೇ ರೀತಿಯ ಎದೆಗುಂದುವಿಕೆ ಇಲ್ಲದೆ ಅನುಸರಿಸಿದಾಗ ಭಾರತ ರಾಜ್ಯವು ಏನನ್ನು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಚಿದಂಬರಂ ತಮ್ಮ ಪತ್ರಿಕಾ ಹೇಳಿಕೆಯನ್ನು ತಿಳಿಸಿದ್ದಾರೆ.