Monday, April 14, 2025

ಚಲಿಸುತ್ತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ; ಏಪೋರ್ಟ್​ ಸಿಬ್ಬಂದಿಗೆ ಗಾಯ

ದೇವನಹಳ್ಳಿ : ಏಪೋರ್ಟ್​ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ ಬಸ್​ ಚಾಲಕನಿಗೆ ಗಂಭೀರ ಗಾಯವಾಗಿದೆ. ಜೊತೆಗೆ ಬಸ್​ನಲ್ಲಿದ್ದ ಏಪೋರ್ಟ್​ ಸಿಬ್ಬಂದಿಗಳಿಗೂ ಚಿಕ್ಕಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಳ ಗೇಟ್ ಬಳಿ ಅಪಘಾತ ಸಂಭವಿಸಿದ್ದು. ಏಪೋರ್ಟ್ ಸಿಬ್ಬಂದಿಯನ್ನು ಪಿಕಪ್​ ಮಾಡಿಕೊಂಡು ಏಪೋರ್ಟ್​ ಕಡೆಗೆ ಹೋಗುತ್ತಿದ್ದ ಮಿನಿ ಬಸ್​ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾಗದೆ. ಅಪಘಾತದಲ್ಲಿ ಬಸ್​ ಮುಂಭಾಗ ಸಂಪೂರ್ಣ ಜಖಂ ಆಗಿದ್ದು. ಬಸ್​ ಚಾಲಕನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಕೋರ್ಟ್​ಗೆ ಚಕ್ಕರ್​, ಸಿನಿಮಾಗೆ ಹಾಜರ್​; ಶಿಷ್ಯನ ಜೊತೆ ಸಿನಿಮಾ ವೀಕ್ಷಿಸಿದ ದರ್ಶನ್​

ಇನ್ನು ಬಸ್​​ನಲ್ಲಿದ್ದ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು. ಅವರನ್ನೆಲ್ಲಾ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ದೇವನಹಳ್ಳೀ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES