Friday, April 18, 2025

ಪೋಟೋಶೂಟ್ ಹೆಸರಲ್ಲಿ ಪ್ರೇಮ ಸಲ್ಲಾಪ; ಕೃಷ್ಣಮಠ ಆವರಣದಲ್ಲಿ ಪ್ರಿ ವೆಡ್ಡಿಂಗ್ ಶೂಟ್​​ಗೆ ಬ್ರೇಕ್​

ಉಡುಪಿ : ಕೃಷ್ಣಮಠ ರಥ ಬೀದಿಯಲ್ಲಿ ಇನ್ಮುಂದೆ ಫ್ರಿ ವೆಡ್ಡಿಂಗ್​ ಶೂಟ್​ಗೆ ಅವಕಾಶವನ್ನು ನಿಷೇಧಿಸಲಾಗಿದೆ. ವೆಡ್ಡಿಂಗ್​ ಶೂಟ್​ ನೆಪದಲ್ಲಿ ಮಠದ ಆವರಣದಲ್ಲಿ ಅಸಭ್ಯ ವರ್ತನೆ ತೋರಲಾಗುತ್ತಿದೆ ಎಂಬ ಆರೋಪವಿದ್ದು. ಇದಕ್ಕೆ ಬ್ರೇಕ್​ ಹಾಕಲು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.

ಫ್ರಿ ವೆಡ್ಡಿಂಗ್​ ಶೂಟ್​ ಇಂದಿನ ಯುವ ಜೋಡಿಗಳಿಗೆ ಆಕರ್ಷಣೆಯ ವಿಷಯವಾಗಿದೆ. ಇದೇ ಕಾರಣಕ್ಕೆ ಪ್ರವಾಸಿ ತಾಣಗಳು ಪೋಟೋಶೂಟ್​ ಸ್ಥಳಗಳಾಗಿ ಬದಲಾಗುತ್ತಿದೆ. ಅದೇ ರೀತಿ ಉಡುಪಿಯ ಕೃಷ್ಣ ಮಠ ಆವರಣದಲ್ಲಿಯೂ ಪೋಟೋಗ್ರಾಫರ್​ಗಳ ಹಾವಳಿ ಹೆಚ್ಚಾಗಿದ್ದು. ಪೋಟೋಶೂಟ್​ ಹೆಸರಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ :ಸೋಫ ನೀಡದೆ ದಲಿತ ನಾಯಕ ಖರ್ಗೆಗೆ ಗಾಂಧಿ ಕುಟುಂಬ ಅವಮಾನ ಮಾಡಿದೆ; ಸುನೀಲ್ ಕುಮಾರ್​

ಕೇರಳ, ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್​ಗಳು ಪೋಟೋಶೂಟ್​ ಹೆಸರಲ್ಲಿ ಕೃಷ್ಣಮಠದ ಆವರಣದಲ್ಲಿ ಪ್ರೇಮಸಲ್ಲಾಪದಲ್ಲಿ ತೊಡಗುತ್ತಿದ್ದು. ಅಷ್ಟಮಠಾದೀಶರು, ಯತಿಗಳು, ದಾಸರು ಓಡಾಡುವ ಬೀದಿಯಲ್ಲಿ ಮುಜುಗರದ ಸನ್ನಿವೇಶ ತಪ್ಪಿಸಲು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.

ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠ ಇಂತಹ ನಿರ್ಧಾರ ಕೈಗೊಂಡಿದ್ದು. ಧಾರ್ಮಿಕ ಸ್ಥಳದಲ್ಲಿ ಮುಜಯಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES