ಕೊಪ್ಪಳ : ಓದುವುದಕ್ಕೆ ಇದೇ ವಯಸ್ಸು ಎಂಬುದಿಲ್ಲ, ಓದುವ ಹುಮ್ಮಸ್ಸು, ಉತ್ಸಾಹವಿದ್ದರೆ ಯಾವುದೇ ವಯಸ್ಸಿನಲ್ಲಿಯೂ ಓದಬಹುದು ಎಂಬುದಕ್ಕೆ ಈ ವರದಿ ಮಾದರಿಯಾಗಿದೆ. 42ನೇ ವಯಸ್ಸಿನಲ್ಲಿ ಗೃಹಿಣಿಯೊಬ್ಬರು ಪಿಯುಸಿ ಪರೀಕ್ಷೆ ಪಾಸ್ ಮಾಡುವ ಮೂಲಕ ಯುವಕರಿಗೆ, ಓದಲಿಲ್ಲ ಎಂದು ಕೊರಗುವವರಿಗೆ ಮಾದರಿಯಾಗಿದ್ದಾರೆ.
ಸತತ ಓದು, ಪರಿಶ್ರಮ ಇದ್ದರೆ ಎಂತಹ ಪರೀಕ್ಷೆಯನ್ನ ಬೇಕಾದರು ಎದುರಿಸಬಹುದು ಎಂಬುದನ್ನು ಕೊಪ್ಪಳದ ಮಹಿಳೆಯೊಬ್ಬರು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರಿನ ಮೃತ್ಯುಂಜಯವ್ವ ಕಂಬಳಿ ಎಂಬ ಮಹಿಳೆ ಈ ಸಾಧನೆ ಮಾಡಿದ್ದು. 42ನೇ ವಯಸ್ಸಿನಲ್ಲಿ ಪಿಯುಸಿ ಓದಲು ದಾಖಲಾಗಿ ಒಂದೇ ಬಾರಿಗೆ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.
ಇದನ್ನೂ ಓದಿ :ಆಲಿಕಲ್ಲು ಸಹಿತ ಭಾರಿ ಮಳೆಗೆ ಅಪಾರ ಪ್ರಮಾಣದ ಭತ್ತ ನಾಶ
ಪತಿ ಮತ್ತು ಮಕ್ಕಳ ಆಸೆ ಈಡೇರಿಸುವ ಸಲುವಾಗಿ ಮೃತ್ಯುಂಜಯವ್ವ ಪರೀಕ್ಷೆ ಬರೆದಿದ್ದು. ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇನ್ನು ಗೃಹಿಣಿ ಸಾಧನೆ ಬಗ್ಗೆ ಎಲ್ಲಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು. ಓದುಲು ವಯಸ್ಸ ಎಂಬುದಿಲ್ಲ ಎಂದು ಮಹಿಳೆ ತೋರಿಸಿಕೊಟ್ಟಿದ್ದಾರೆ.