Friday, May 9, 2025

ಸೋಫಾ ನೀಡದೆ ದಲಿತ ನಾಯಕ ಖರ್ಗೆಗೆ ಗಾಂಧಿ ಕುಟುಂಬ ಅವಮಾನ ಮಾಡಿದೆ; ಸುನೀಲ್ ಕುಮಾರ್​

ಉಡುಪಿ : ಗುಜರಾತಿನ ಅಹ್ಮದಾಬಾದ್​ನಲ್ಲಿ ನಡೆದ ಕಾಂಗ್ರೆಸ್​ ಅಧಿವೇಶನದ ಪ್ರಾಥನಾ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯನ್ನು ಸೋಫಾ ಬಿಟ್ಟು, ಬೇರೆ ಚೇರ್​ನಲ್ಲಿ ಕೂರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು. ಬಿಜೆಪಿ ಶಾಸಕ ಸುನೀಲ್​ ಕುಮಾರ್​ ಕೂಡ ಕಾಂಗ್ರೆಸ್​ನ ಈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತ ಎಂಬ ಕಾರಣಕ್ಕೆ ಅವರಿಗೆ ಸೈಡ್​ನಲ್ಲಿ ಕೂರಿಸಿದ್ದಾರೆ ಎಂದು ಹೇಳಿದರು.

ಮೋದಿ ತವರೂರು ಗುಜರಾತ್​ನಲ್ಲಿ ಕಾಂಗ್ರೆಸ್​ ಅಧಿವೇಶನ ನಡೆಯುತ್ತಿದ್ದು. ಈ ಅಧಿವೇಶನದ ಪ್ರಾಥನ ಸಭೆಯಲ್ಲಿ ಕಾಂಗ್ರೆಸ್​ನ ಅತ್ಯುನ್ನತ ನಾಯಕ ಮಲ್ಲಿಕಾರ್ಜುನ್​ ಖರ್ಗೆಯನ್ನು ಸೈಡ್​ ಲೈನ್​ ಮಾಡಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಈ ಕುರಿತು ಕಾರ್ಕಳ ಶಾಸಕ ಸುನೀಲ್​ ಕುಮಾರ್​ ಹೇಳಿಕೆ ನೀಡಿದ್ದು “ಕಾಂಗ್ರೆಸ್​ನ ಅತ್ಯುನ್ನತ ನಾಯಕನನ್ನು ದಲಿತ ಎಂಬ ಕಾರಣಕ್ಕೆ ಸಪರೇಟ್ ಸೈಡಲ್ಲಿ ಕುರ್ಚಿ ಹಾಕಿ ಕೂರಿಸಿದ್ದಾರೆ. ಸೆಂಟರ್​ ಫ್ರೇಮ್​ನಲ್ಲಿ ಸೋನಿಯಾ ಮತ್ತು ರಾಹುಲ್​​ರನ್ನು ಕೂಡಿಸಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್​ ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬುದು ತಿಳಿಯುತ್ತದೆ.

ಇದನ್ನೂ ಓದಿ :ನಾಯಿ ಕಚ್ಚಿದೆ ಎಂದು ಆಸ್ಪತ್ರೆಗೆ ಹೋದ ಮಹಿಳೆ ಕಣ್ಣಿಗೆ ಚಿಕಿತ್ಸೆ ನೀಡಿದ ವೈದ್ಯರು

ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು ಆತ ಸಭಾಂಗಣದ ಮಿಡಲ್ ಫ್ರೇಮ್ ನಲ್ಲಿ ಇರಬೇಕು. ಆದರ ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಸೈಡಿನಲ್ಲಿ ಕೂರಿಸಿದ್ದಾರೆ. ಗಾಂಧಿ ಕುಟುಂಬ ಖರ್ಗೆಯವರು ದಲಿತರು ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಂಡಿದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಬೆಂಕಿ ಹಾಕಿದಾಗಲೂ ಇದೇ ವರ್ತನೆಯನ್ನು ಕಾಂಗ್ರೆಸ್​ ತೋರಿಸಿದೆ. ಕಾಂಗ್ರೆಸ್​ ಎಂದು ದಲಿತರಿಗೆ ಗೌರವ ಕೊಟ್ಟಿಲ್ಲ. ಅವರು ಅಂಬೆಡ್ಕರ್​ಗೆ ಟಿಕೆಟ್ ಕೊಟ್ಟಿಲ್ಲ. ಖರ್ಗೆಯವರಿಗೆ ಸ್ವಾಭಿಮಾನ ಇದ್ದಿದ್ದರೆ, ಅವರು ಅಧಿವೇಶನದಿಂದ ಎದ್ದು ಬರಬೇಕಿತ್ತು ಎಂದು ಹೇಳಿದರು.

ಇನ್ನು ಈ ಕುರಿತು ಬಿಜೆಪಿ ನಾಯಕ ಅಮಿತ್​ ಮಾಳವೀಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದು. “ಗಾಂಧಿ ಕುಟುಂಬ ಮೊದಲು ಖರ್ಗೆ ಅವರನ್ನು ಗೌರವಿಸುವುದನ್ನು ಕಲಿಯಿರಿ. ಅವರು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರು. ಅವನ ಕುರ್ಚಿಯನ್ನು ಅಂಚಿನಲ್ಲಿ ಇಡುವುದರ ಅರ್ಥವೇನು? ಇದು ಕಾಂಗ್ರೆಸ್ ದಲಿತ ವಿರೋಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES