Tuesday, April 15, 2025

ಒಲಂಪಿಕ್​ ಕ್ರೀಡಾಕೂಟಕ್ಕೆ ಮೊದಲ ಬಾರಿಗೆ ಕ್ರಿಕೆಟ್​ ಸೇರ್ಪಡೆ; ಕೇವಲ 6 ತಂಡಗಳಿಗಷ್ಟೆ ಅವಕಾಶ

ವಾಷಿಂಗ್ಟನ್‌: ವಿಶ್ವದ ಪ್ರತಿಷ್ಟಿತ ಕ್ರೀಡಾಕೂಟಕ್ಕೆ ಕ್ರಿಕೆಟ್​ ಮರಳಿ ಸೇರ್ಪಡೆಯಾಗಿದ್ದು. 2028ರಲ್ಲಿ ಅಮೇರಿಕಾದಲ್ಲಿ ನಡೆಯುವ ಒಲಂಪಿಕ್​ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯ ತಲಾ 6 ತಂಡಗಳು ಸ್ಪರ್ಧೆ ಮಾಡಲಿವೆ ಎಂದು ಅಂತರ್ ರಾಷ್ಟ್ರೀಯ ಒಲಂಪಿಕ್​ ಸಮಿತಿ ಖಚಿತಪಡಿಸಿದೆ.

ಚುಟುಕು ಕ್ರಿಕೆಟ್(T20)​ ಮಾದರಿಯಲ್ಲಿ ಕ್ರಿಕೆಟ್​ ಕ್ರೀಡಾಕೂಟ ನಡೆಯಲಿದ್ದು, ಪ್ರತಿ ತಂಡವೂ ಒಟ್ಟು 15 ಆಟಗಾರರನ್ನು ಒಳಗೊಂಡಿರಲಿದೆ. ಇತ್ತೀಚೆಗೆ ಸ್ಕ್ವಾಷ್, ಫ್ಲ್ಯಾಗ್ ಫುಟ್‌ಬಾಲ್, ಬೇಸ್‌ಬಾಲ್/ಸಾಫ್ಟ್‌ಬಾಲ್ ಮತ್ತು ಲ್ಯಾಕ್ರೋಸ್ ಜೊತೆಗೆ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸೇರಿಸಲಾದ 5 ಹೊಸ ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ.

ಇದನ್ನೂ ಓದಿ :ಬೆಂಗಳೂರು ಸುತ್ತಮುತ್ತ ಏರ್​ಪೋರ್ಟ್​ ಮಾಡಿದರೆ ಟ್ರಾಫಿಕ್​ ಹೆಚ್ಚಾಗುತ್ತೆ; ಸತೀಶ್​ ಜಾರಕಿಹೊಳಿ

2028ರ ಒಲಿಂಪಿಕ್ಸ್‌ ಕ್ರೀಡಾಕೂಟವು 351 ಪದಕ ಕ್ರೀಡೆಗಳನ್ನು ಒಳಗೊಂಡಿರಲಿದೆ. 10,500 ಅಥ್ಲಿಟ್‌ಗಳು ಪಾಲ್ಗೊಳ್ಳಲಿದ್ದಾರೆ, ಜೊತೆಗೆ 5 ಹೊಸ ಕ್ರೀಡೆಗಳಿಂದ ಹೆಚ್ಚುವರಿ 698 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ಈ ಹಿಂದೆ 1990ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್‌ ಸೇರ್ಪಡೆಯಾಗಿತ್ತು. ಆಗ ಇಂಗ್ಲೆಂಡ್​-ಫ್ರಾನ್ಸ್​ ಪುರುಷರ ತಂಡಗಳ ನಡುವೆ ಏಕೈಕ ಪಂದ್ಯ ನಡೆದಿತ್ತು. 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಒಂದು ಭಾಗವಾಗಿತ್ತು. ಅಲ್ಲದೇ 2023ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ 9 ಮಹಿಳಾ ತಂಡಗಳು ಮತ್ತು 14 ಪುರುಷರ ತಂಡಗಳು ಕ್ರಿಕೆಟ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟೀಂ ಇಂಡಿಯಾ ಎರಡೂ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿತ್ತು.

RELATED ARTICLES

Related Articles

TRENDING ARTICLES