ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಗ್ರಾಲ್ ಗ್ರಾಮದಲ್ಲಿ ಕಾಲೇಜಿಗೆ ಹೋಗುವಂತೆ ತಂದೆ ಸೂಚಿಸಿದ್ದಕ್ಕೆ ಮನನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದು. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು 20 ವರ್ಷದ ಸಾಗರ್ ತುಕಾರಾಂ ಕುರಾಡೆ ಎಂದು ಗುರುತಿಸಲಾಗಿದೆ.
ಸಾಗರ್ ತುಕಾರಾಂ ಕುರಾಡೆ ಸದಲಗಾ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದನು. ಮೊಬೈಲ್ ನೋಡುವ ಚಟಕ್ಕೆ ಬಿದ್ದಿದ್ದ ಸಾಗರ್ ಕಾಲೇಜಿಗೆ ಹೋಗದೆ ಸದಾ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಪೋಷಕರು ಕಾಲೇಜಿಗೆ ಹೋಗು ಎಂದು ಎಷ್ಟೇ ಒತ್ತಾಯಿಸದರು ಸಾಗರ್ ಅವರ ಮಾತು ಕೇಳುತ್ತಿರಲಿಲ್ಲ. ಇದಕ್ಕೆ ಪೋಷಕರು ಸಾಗರ್ಗೆ ಕಾಲೇಜಿಗೆ ಹೋಗು ಎಂದು ಬೈದಿದ್ದಕ್ಕೆ ಸಾಗರ್ ತನ್ನ ಮನೆಯ ಮುಂದಿನ ಹಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ :ಮುಡಾ ಬೆನ್ನಲ್ಲೇ ಸಿಎಂಗೆ ಮತ್ತೊಂದು ಸಂಕಷ್ಟ; 500 ಕೋಟಿ ಕಿಕ್ಬ್ಯಾಕ್ ಆರೋಪ
ಸಾಗರ್ ತಂದೆ ಚಿಕ್ಕೋಡಿಯ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಗರ್ ಅಗಲಿಕೆ ಪೋಷಕರಿಗೆ ಬರಿಸಲಾಗದ ನೋವುಂಟು ಮಾಡಿದೆ.