Thursday, May 8, 2025

ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ; ವಿಜಯೇಂದ್ರ

ಹಾಸನ : ರಾಜ್ಯ ಬಿಜೆಪಿ ಬೆಲೆಏರಿಕೆ ವಿರುದ್ದ ಪ್ರತಿಭಟನೆ ಕೈಗೊಂಡಿದ್ದು. ಜನಾಕ್ರೋಶ ಯಾತ್ರೆ ಮಾಡುವ ಮೂಲಕ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದೆ. ಇದರ ಭಾಗವಾಗಿ ನೆನ್ನೆ ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು. ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಿ, ಬಿಜೆಪಿಯನ್ನು ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ.

ಜನಾಕ್ರೋಶ ಯಾತ್ರೆಯ ಬಗ್ಗೆ ಮಾತನಾಡಿದ ವಿಜಯೇಂದ್ರ ‘ಎಲ್ಲಾ ಜಿಲ್ಲೆಯಲ್ಲೂ ನಿರೀಕ್ಷೆಗು ಮೀರಿದ ಪ್ರತಿಕ್ರಿಯೆ ಸಿಗುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ಹೊಂದಿದ್ದಾರೆ. ತಾಳ್ಮೆಯ ಕಟ್ಟೆ ಒಡೆಯುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಬೆಲೆ ಏರಿಕೆ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ, ಭ್ರಷ್ಟಚಾರದಲ್ಲಿ ರಾಜ್ಯವೇ ನಂಬರ್ ಒನ್​ ಎಂಬ ಸರ್ಟಿಫಿಕೇಟ್​ನನ್ನು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ :ಆರ್​ಬಿಐ ಮಹತ್ವದ ನಿರ್ಧಾರ; ಸತತ ಎರಡನೇ ಬಾರಿ ರೆಪೋ ದರ ಇಳಿಕೆ

ಕೇಂದ್ರ ಸರ್ಕಾರ ಪೆಟ್ರೋಲ್ ಡೀಸಲ್ ಬೆಲೆ ಏರಿಸಿದ್ದಾರೆ. ಇದಕ್ಕೆ ಕಾರಣ ಕಚ್ಚಾತೈಲ ಬೆಲೆ ಏರಿಕೆ, ಆದರೆ ಇದರ ಹೊರೆ ಜನರ ಮೇಲೆ ಹಾಕಿಲ್ಲ. ಗ್ಯಾಸ್ ಮೇಲೆ 50 ರೂ ಏರಿಕೆ ಮಾಡಿದ್ದಾರೆ. ಆದರೆ ಗ್ಯಾಸ್ ಬೆಲೆ ಕಡಿಮೆ‌ ಮಾಡಿದ್ದರು ಈಗ ಸ್ವಲ್ಪ ಪ್ರಮಾಣದ ಬೆಲೆ ಏರಿಕೆ ಆಗಿದೆ ಅಷ್ಟೇ. ಕಾಂಗ್ರೆಸ್ ಅರ್ಧ ಸತ್ಯ ಹೇಳುತ್ತಿದ್ದಾರೆ, ಆದರೆ
ವಾಸ್ತವ ಬೇರೆ ಇದೆ. ಅದನ್ನ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಇದನ್ನ ಜನರ ಮುಂದೆ ತೆರೆದಿಡುತ್ತೇವೆ,
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ತಕ್ಷಣ ಸ್ಪಂದನೆ ನೀಡುವುದು ನಮ್ಮ‌ ಕರ್ತವ್ಯ ಎಂದು ಹೇಳಿದರು.

ಜೆಡಿಎಸ್​ ಜೊತೆ ಗೊಂದಲವಿಲ್ಲ, ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇವೆ

ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳೆರಡು ಪ್ರತ್ಯೇಕವಾಗಿ ಹೋರಾಟ ಮಾಡುವ ಬಗ್ಗೆ ಮಾತನಾಡಿದ ವಿಜಯೇಂದ್ರ ‘ಜೆಡಿಎಸ್ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ, ಮುಂದಿನ ದಿನಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇನೆ.

ಪಕ್ಷದ ಅಧ್ಯಕ್ಷನಾಗಿ ಪಕ್ಷಕ್ಕೆ ಬಲ ತುಂಬುವುದು ನನ್ನ ಕರ್ತವ್ಯ ಅದನ್ನ ನಾನು ಮಾಡ್ತಾ ಇದ್ದೇನೆ. ಜಾತಿ ಜನಗಣತಿಯನ್ನ ಬೆದರು ಗೊಂಬೆ ತರ ಬಳಕೆ ಮಾಡ್ತಾ ಇದ್ದಾರೆ. ಸರ್ಕಾರದ ಬುಡ ಅಲ್ಲಾಡಿದಾಗ ಇದರ ನಾಟಕ ಮಾಡ್ತಾರೆ. ಸರ್ಕಾರಕ್ಕೆ ನಿಜ ಕಾಳಜಿ ಇಲ್ಲ. ಸರ್ಕಾರದ ಯೋಗ್ಯತೆಗೆ ಸಿದ್ದರಾಮಯ್ಯ ಅವರಿಗೆ ಪ್ರಾಮಾಣಿಕತೆ ಇದ್ದರೆ ಜಾತಿ ಗಣತಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

RELATED ARTICLES

Related Articles

TRENDING ARTICLES