ಹಾಸನ : ನಿನ್ನೆಯಷ್ಟೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಕೆ.ಪಿ ಮನೋಜ್ ಎಂದು ಗುರುತಿಸದ್ದು. ಈತ ಪರೀಕ್ಷೆಯಲ್ಲಿ 79% ಅಂಕ ಪಡೆದಿದ್ದನು.
ಹಾಸನದ ಅರಸೀಕೆರೆಯಲ್ಲಿ ಘಟನೆ ನಡೆದಿದ್ದು. ಮನೋಜ್ ಅನಂತ್ ಇಂಟರ್ನ್ಯಾಷಿನಲ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಎಸ್ಎಸ್ಎಲ್ಸಿಯಲ್ಲಿ 98% ಅಂಕ ಗಳಿಸಿದ್ದ ಮನೋಜ್. ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಅಂಕದ ನಿರೀಕ್ಷೆಯಲ್ಲಿದ್ದ. ಆದರೆ ಪಿಯುಸಿಯಲ್ಲಿ 79% ಅಂಕ ಪಡೆದಿದ್ದು ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಹೆಣ್ಣು ನೋಡಲು ಬಂದು ಅತ್ತೆಯನ್ನೇ ಓಡಿಸಿಕೊಂಡು ಹೋದ ಅಳಿಯ
ನಿನ್ನೆ(ಏ.08) ಮೈಸೂರಿನಲ್ಲಿ ಐಶ್ವರ್ಯ ಎಂಬ ಯುವತಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ವರದಿಯಾಗಿತ್ತು. ಆದರೆ ಬದುಕಿ ಬಾಳಬೇಕಿದ್ದ ಯುವ ಸಮಾಜ ಕೇವಲ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಕ್ಕೆ, ಕಡಿಮೆ ಅಂಕ ಪಡೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಅಘಾತಕಾರಿಯಾದ ವಿಷಯವಾಗಿದೆ.