ಮಂಗಳೂರು : ಬೆಲೆ ಏರಿಕೆ ವಿರುದ್ದ ರಾಜ್ಯ ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ರಾಜ್ಯದ್ಯಂತ ಹೋರಾಟಕ್ಕೆ ಸಿದ್ದತೆ ನಡೆಸಿದೆ. ಇದರ ಅಂಗವಾಗಿ ಮಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು. ಪ್ರವೀಣ್ ನೆಟ್ಟರೂ ಕೊಲೆ ಆರೋಪಿಗೆ ಮುತ್ತು ಕೊಟ್ಟದನ್ನು ಉಲ್ಲೇಖಿಸಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿದ್ದರೆ ಕಿಸ್ ಕೊಟ್ಟ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು ಎಂದು ಹೇಳಿದರು.
ಪ್ರವೀಣ್ ನೆಟ್ಟರೂ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದ ಸಂದರ್ಭದಲ್ಲಿ, ಕೋರ್ಟ್ ಆವರಣದಲ್ಲಿ ನಿಂತಿದ್ದ ವ್ಯಕ್ತಿಯೋರ್ವ ಆರೋಪಿಯ ತಲೆಗೆ ಮುತ್ತುಕೊಟ್ಟಿದ್ದನು. ಇದನ್ನು ಉಲ್ಲೇಖಿಸಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ವಿಜಯೇಂದ್ರ ‘ಉಪ್ಪಿನಂಗಡಿಯಲ್ಲಿ ದೇಶದ್ರೋಹಿ ವ್ಯಕ್ತಿಗೆ ಒಬ್ಬಾತ ಕಿಸ್ ಕೊಟ್ಟಿದ್ದಾನೆ. ಯಡಿಯೂರಪ್ಪ ಸರ್ಕಾರ ಇರುತ್ತಿದ್ದರೆ ಕಿಸ್ ಕೊಟ್ಟ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲುತ್ತಿತ್ತು ಎಂದು ಹೇಳಿದರು.
ಇದನ್ನೂ ಓದಿ :ಇವಿಎಂ ದುರ್ಬಳಕೆಯಿಂದ ಬಿಜೆಪಿ ಗೆಲ್ಲುತ್ತಿದೆ; ಯುವಕರು ಬ್ಯಾಲೆಟ್ ಪೇಪರ್ಗಾಗಿ ಒತ್ತಾಯಿಸಬೇಕು: ಖರ್ಗೆ
ಮುಂದುವರಿದು ಮಾತನಾಡಿದ ವಿಜಯೇಂದ್ರ ‘ಹಿಂದು ಹುಡುಗಿಯರ ಆತ್ಮರಕ್ಷಣೆಗೆ ಸಿದ್ದರಾಮಯ್ಯ ಯಾವುದೇ ಯೋಜನೆ ಕೊಟ್ಟಿಲ್ಲ. ಆದರೆ ಮುಸ್ಲಿಂ ಹುಡುಗಿಯರ ಆತ್ಮ ರಕ್ಷಣೆಗೆ, ಅವರ ವಿದೇಶಿ ಉನ್ನತ ಶಿಕ್ಷಣಕ್ಕಾಗಿ ಯೋಜನೆ ಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಗುಜರಾತ್ ಬಳಿಕ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು.
ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದಿದೆ. ಇದನ್ನೂ
ನಾವು ಹೇಳ್ತಾ ಇಲ್ಲ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿರುವ ಮಾತು.
ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಸರ್ಕಾರ ಇದ್ದಾಗ 19 ಸಾವಿರ ಕೋಟಿ ಕೊಟ್ಟಿದ್ದರು. ಸಿದ್ದರಾಮಯ್ಯ ಸರ್ಕಾರ ಯಾಕೆ ದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ ಬೆಂಗಳೂರಿಗೆ ಮಾತ್ರ ಸಿಎಂ ಆಗಿದ್ದಾರೆ.
ಇವರು ಬೆಂಗಳೂರು ಬಿಟ್ಟು ಬಂದರೆ ಡಿಕೆಶಿ ತನ್ನ ಸ್ಥಾನ ಕಿತ್ತುಕೊಳ್ಳುವ ಭಯ ಇದೆ. ಜೊತೆಗೆ, ಹೊರಗೆ ಬಂದರೆ ಜನರು ಬಡಿಗೆ ತೆಗೆದು ಬಡಿಯುತ್ತಾರೆಂಬ ಭಯವೂ ಇದೆ. ಹೀಗಾಗಿ ಸಿದ್ದರಾಮಯ್ಯ ಬೆಂಗಳೂರು ಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಗ್ದಾಳಿ ನಡೆಸಿದರು.