Tuesday, April 15, 2025

ಇವಿಎಂ ದುರ್ಬಳಕೆಯಿಂದ ಬಿಜೆಪಿ ಗೆಲ್ಲುತ್ತಿದೆ; ಯುವಕರು ಬ್ಯಾಲೆಟ್​ ಪೇಪರ್​ಗಾಗಿ ಒತ್ತಾಯಿಸಬೇಕು: ಖರ್ಗೆ

86ನೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನದ ಉದ್ಘಾಟನಾ ಭಾಷಣದಲ್ಲಿ, ಶ್ರೀ ಮಲ್ಲಿಕಾರ್ಜುನ್​ ಖರ್ಗೆ ಅವರು ಚುನಾವಣಾ ಕಾರ್ಯವಿಧಾನಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಮೋದಿ ಸರ್ಕಾರದ ಮೇಲೆ ಕಟುವಾದ ದಾಳಿ ನಡೆಸಿದರು.

ಕಾಂಗ್ರೆಸ್​ ಅಧಿವೇಶನದಲ್ಲಿ ಮಾತನಾಡಿದ ಖರ್ಗೆ ಮಹರಾಷ್ಟ್ರದ ಲೋಕಸಭ ಚುನಾವಣೆಯಲ್ಲಿ ಕಾಂಗ್ರೆಸ್​ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ವಿಧಾನಸಭ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ 150 ಸ್ಥಾನಗಳ ಪೈಕಿ 138ರಲ್ಲಿ ಗೆಲುವು ಸಾಧಿಸಿದೆ. ಇವೆಲ್ಲವೂ ವಂಚನೆಯಿಂದ ಮಾತ್ರ ಸಾಧ್ಯವಾಗಿದೆ. ಇದು ಹೀಗೆಯೆ ಮುಂದುವರಿದರೆ ದೇಶದ ಯುವಕರು ಶೀಘ್ರದಲ್ಲೆ ಎದ್ದು ನಿಂತು ಬ್ಯಾಲೆಟ್​ ಪೇಪರ್​ಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ : ಪಿಯುಸಿ ಪರೀಕ್ಷೆಯಲ್ಲಿ ಕೇವಲ 79% ಅಂಕ ಪಡೆದೆ ಎಂಬ ಕಾರಣಕ್ಕೆ ವಿದ್ಯಾರ್ಥಿ ಆತ್ಮಹ*ತ್ಯೆ

ಹರಿಯಾಣದಲ್ಲೂ ಇದೇ ರೀತಿಯಾಗಿ ನಡೆದಿದೆ. ಇಂತಹ ಮೋಸ ಈ ಹಿಂದೆ ಎಂದೂ ನಡೆದಿರಲಿಲ್ಲ. ಇದು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಉದ್ದೇಶದಿಂದ ಮಾಡಲಾಗಿದೆ. ನಾವು ಇದನ್ನು ಕಂಡುಹಿಡಿಯುತ್ತೇವೆ. ಕಳ್ಳ ಒಂದು ದಿನ ಸಿಕ್ಕಿಬೀಳುತ್ತಾನೆ. ನಮ್ಮ ವಕೀಲರು ಮತ್ತು ನಾಯಕರು ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಇಡೀ ವಿಶ್ವ ಇವಿಎಂನಿಂದ ಬ್ಯಾಲೆಟ್​ ಪೇಪರ್​ ಕಡೆಗೆ ಬದಲಾಗುತ್ತಿದೆ, ಆದರೆ ನಾವಿನ್ನೂ ಇವಿಎಂ ಬಳಸುತ್ತಿದ್ದೇವೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಖರ್ಗೆ “ಕಳೆದ 11 ವರ್ಷಗಳಿಂದ ಆಡಳಿತ ಪಕ್ಷ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಸಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಇವುಗಳನ್ನು ರಕ್ಷಿಸಲು ನಾವು ಹೋರಾಡಬೇಕಾಗಿದೆ. ಸರ್ಕಾರವು ಸಂಸತ್ತಿನ ಬಜೆಟ್ ಅಧಿವೇಶನವನ್ನು ತನ್ನ ಇಚ್ಛೆಯಂತೆ ನಡೆಸುತ್ತಿದೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನವಾಗಿದೆ. ಮೋದಿ ಸರ್ಕಾರ ಸಾರ್ವಜನಿಕ ಸಂಪನ್ಮೂಲಗಳನ್ನು ಕೆಲವೇ ಕೆಲವು ಉದ್ಯಮಿಗಳಿಗೆ ಮಾರುತ್ತಿದೆ. 500 ವರ್ಷದ ವರ್ಷಗಳ ಹಳೆಯ ವಿಷಯಗಳನ್ನು ಎತ್ತಿ ಜನರಲ್ಲಿ ಧಾರ್ಮಿಕ ಒಡಕು ಮೂಡಿಸುತ್ತಿದೆ” ಎಂದು ಆಡಳಿತರೂಡ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

 

RELATED ARTICLES

Related Articles

TRENDING ARTICLES