ಪಾಟ್ನಾ: ಬಿರು ಬೇಸಿಗೆಯಲ್ಲಿ ಬೆಂದಿರುವ ಜನರಿಗೆ ಬಿಹಾರದ ಕ್ರೀಡಾ ಸಚಿವನೊಬ್ಬ ಬ್ಲಾಂಕೆಟ್ ವಿತರಿಸಿದ್ದು. ವಿತರಿಸಿದಲ್ಲದೆ ಅದರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಯಾರಪ್ಪ ಇದು ಬಿಸಿಲಿನಲ್ಲಿ ಬ್ಲಾಂಕೆಟ್ ಹಂಚಿದ ಮಹಾನಾಯಕ ಅಂತೀರ, ಅದು ಬೇರೆ ಯಾರೂ ಅಲ್ಲ ಅದು ಬಿಹಾರದ ಕ್ರೀಡಾ ಸಚಿವ ಸುರೇಂದ್ರ ಕುಮಾರ್ ಮೆಹ್ತಾ.
ದೇಶದ ಹಲವು ರಾಜ್ಯಗಳು ಬಿಸಿಲಿನಿಂದ ತತ್ತರಿಸುತ್ತಿವೆ. ಇದಕ್ಕೆ ಬಿಹಾರ ರಾಜ್ಯವೂ ಹೊರತಾಗಿಲ್ಲ. ಬಿಹಾರದಲ್ಲೂ ಸರಾಸರು ಉಷ್ಣಾಂಶ 40 ಡಿಗ್ರಿ ತಲುಪಿದ್ದು. ಇಂತಹ ಬಿಸಿಲಿನಲ್ಲಿ ಬಿಹಾರದ ಸಚಿವರೊಬ್ಬರು ಜನರಿಗೆ ಬೆಡ್ಶೀಟ್ ಹಂಚಿದ್ದಾರೆ. ಬಿಜೆಪಿಯ ಸಂಸ್ಥಾಪನಾ ದಿನದ ಅಂಗವಾಗಿ ಬೇಗುಸರಾಯ್ ಜಿಲ್ಲೆಯ ಮನ್ಸುರ್ಚಕ್ ಬ್ಲಾಕ್‌ನ ಅಹಿಯಾಪುರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಸುಮಾರು 700 ಜನರಿಗೆ ಸಾಂಪ್ರದಾಯಿಕ ಬಟ್ಟೆಗಳು ಮತ್ತು ಬ್ಲಾಂಕೆಟ್ ಗಳನ್ನು ವಿತರಿಸಿದ್ದಾರೆ.
ಇದನ್ನೂ ಓದಿ :ಯಡಿಯೂರಪ್ಪ ಸರ್ಕಾರ ಇದ್ದಿದ್ದರೆ ಕಿಸ್ ಕೊಟ್ಟ ವ್ಯಕ್ತಿಗೆ ಗುಂಡಿಕ್ಕಿ ಕೊಲ್ಲುತ್ತಿತ್ತು; ವಿಜಯೇಂದ್ರ
ಫಲಾನುಭವಿಗಳಿಗೆ ಬಟ್ಟೆಗಳ ಅಗತ್ಯ ಇತ್ತು. ಅವರಿಗೆ ಸಾಂಪ್ರದಾಯಿಕ ‘ಆಂಗ್ ವಸ್ತ್ರ’ವನ್ನು ನೀಡಲು ನಾವು ಈ ಸಂದರ್ಭವನ್ನು ಆಯ್ಕೆ ಮಾಡಿಕೊಂಡೆವು. ಇದೇ ವೇಳೆ ಜನರಿಗೆ ಬ್ಲಾಂಕೆಟ್ ಅನ್ನು ಸಹ ಹಸ್ತಾಂತರಿಸಲಾಯಿತು” ಎಂದು ಸಚಿವರ ಆಪ್ತರೊಬ್ಬರು ವರದಿಗಾರರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಬಿರು ಬೇಸಿಗೆಯಲ್ಲಿ ಸಚಿವರು ಬ್ಲಾಂಕೆಟ್ ವಿತರಿಸುವ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚುನಾವಣೆ ಸಮೀಪಿಸುತ್ತಿರುವ ಬಿಹಾರದಲ್ಲಿ ಅವರ ಈ ಕ್ರಮ ರಾಜಕೀಯ ಟೀಕೆಗೆ ಕಾರಣವಾಗಿದೆ. ಟೀಕೆ ವ್ಯಕ್ತವಾಗುತ್ತಿದ್ದಂತೆ ಸಚಿವ ಮೆಹ್ತಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.