ಬಾಗಲಕೋಟೆ : ಜಿಲ್ಲೆಯ ಜಮಖಂಡಿ ನಗರದ, ರಾಮತಿರ್ಥ ದೇವಾಲಯದ ಬಳಿ ಮೂವರು ಅನ್ಯ ಕೋಮಿನ ಯುವಕರು ರಸ್ತೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರಿಗೆ ಕರಪತ್ರ ನೀಡಿ ಮತಾಂತರಕ್ಕೆ ಪ್ರಚೋದನೆ ನೀಡ್ತಿರೋ ವಿಡಿಯೋ ವೈರಲ್ ಆಗಿದೆ. ಈ ಕುರಿತು ರಮೇಶ್ ಎಂಬುವವರು ಜಮಖಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಮತಾಂತರಕ್ಕೆ ಪ್ರಚೋದನೆ ನೀಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಮತಾಂತರಕ್ಕೆ ಪ್ರಚೋದನೆ ನೀಡಿದ ಮುಸ್ತಾಪಾ, ಸುಲೇಮಾನ್, ಅಲಿಬಾಸ್ ಎಂಬ ಮೂವರು ಜಮಖಂಡಿ ನಗರ ನಿವಾಸಿಗಳಾಗಿದ್ದು. ದೇವಾಲಯದ ರಸ್ತೆಯಲ್ಲಿ ನಿಂತು ಬರೋ ಅನ್ಯ ಧರ್ಮದ ಜನರಿಗೆ ಮತಾಂತರಕ್ಕೆ ಪ್ರಚೋದನೆ ನೀಡುವ ಕಾರ್ಯದಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆಗಿದೆ. ವಿಡಿಯೋ ಆದರಿಸಿ ರಮೇಶ್ ಎಂಬ ಯುವಕ ಜಮಖಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಮತಾಂತರಕ್ಕೆ ಪ್ರಚೋಧನೆ ನೀಡುತ್ತಿದ್ದ ಮೂವರು ಆರೋಪಿತರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : ಮೆಟ್ರೋ ರೈಲಿನಲ್ಲಿ ಮೊಟ್ಟೆ ಜೊತೆ ಎಣ್ಣೆ ಹೊಡೆದ ಭೂಪ..
ಇವರ ಹಿಂದೆ ಬೇರೆ ಯಾರಿದ್ದಾರೆ. ಇವರಿಗೆ ದುಬೈ ಸಂಪರ್ಕವಿದೆಯಾ ಎಂದು ವಿಚಾರಣೆ ನಡೆಸುತ್ತಿದ್ದಾರೆ.ಶಾಂತಿ ಸೌಹಾರ್ದತೆಯಿಂದ ಇರೋ ಜಮಖಂಡಿ ನಗರದಲ್ಲಿ ಇದೀಗ ಇಂತಹ ಮತಾಂಧರಿಂದ ದಾರ್ಮಿಕ ದಕ್ಕೆ ಸೃಷ್ಠಿಯಾಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಜಮಖಂಡಿ ನಗರದಲ್ಲಿ ಮತಾಂತರಕ್ಕೆ ಪ್ರಚೋಧನೆ ನೀಡ್ತಿದ್ದವರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.