ತುಮಕೂರು: ನೀರಿಗಾಗಿ ನಾರಿಯರು ಬಡಿದಾಡಿಕೊಳ್ಳುವ ಚಿತ್ರಗಳ ಇತ್ತೀಚೆಗೆ ಮರೆಯಾಗುತ್ತಿದೆ ಎನ್ನುವಷ್ಟರಲ್ಲಿ ಕುಡಿಯುವ ನೀರನ್ನ ಗ್ರಾಪಂ ಸದಸ್ಯ ತೋಟಕ್ಕೆ ಹಾಯಿಸಿಕೊಳ್ಳುತ್ತಿದ್ದಾರೆ ಎಂದು ನಾರಿ ಮಣಿಯರು ಪಿಡಿಓ ಮುಂದೆಯೇ ಜಡೆ ಇಡಿದು ಬಡಿದಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ಕಾರೇಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಹರಿಯುವ ಪೈಪ್‌ಲೈನ್ ಗ್ರಾಪಂ ಸದಸ್ಯೆ ಯಶೋದಮ್ಮ ಮತ್ತು ಮಮತಾ ಅವರ ಜಮೀನಿನಲ್ಲಿ ಹಾದು ಹೋಗಿದೆ ಈ ಪೈಲ್‌ಪೈನ್‌ನಲ್ಲಿ ಅಕ್ರಮವಾಗಿ ಸಂಪರ್ಕ ಪಡೆದು ಇವರಿಬ್ಬರೂ ಅಡಕೆ ತೋಟಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ದರು ಅನ್ನೋ ಆರೋಪ ಮಾಡಿ ಅಕ್ರಮ ಸಂಪರ್ಕ ಕಡಿತ ಜತೆಗೆ ದಂಡ ವಿಧಿಸುವಂತೆ ಗ್ರಾಮಸ್ಥರು ಗಾಣದಾಳು ಗ್ರಾಪಂ ಪಿಡಿಒ ಕೋಕಿಲಾಗೆ ದೂರು ನೀಡಿದ್ದರು.
ಇನ್ನೂ ದೂರು ಆಧರಿಸಿ ಸ್ಥಳ ಪರಿಶೀಲನೆಗೆ ಬಂದ ವೇಳೆ ಗ್ರಾಮಸ್ಥೆ ಮಮತಾ ತೋಟದ ಮನೆಗಳಿಗೆ ನಲ್ಲಿ ಹಾಕಿಲ್ಲ ಕರೆಂಟ್ ಇಲ್ಲದ ವೇಳೆ ಕುಡಿಯುವ ನೀರು ಹಿಡಿದುಕೊಳ್ಳಲು ಈ ಪೈಪ್‌ಲೈನ್‌ನಲ್ಲಿ ವಾಲ್ ಹಾಕಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ಬೊರ್‌ನಿಂದ ಅಡಕೆ ಗಿಡಗಳಿಗೆ ನೀರು ಕಟ್ಟಿದ್ದೇವೆ. ಪಂಚಾಯಿತಿ ಪೈಪ್‌ಲೈನ್‌ನಿಂದ ನೀರು ಹರಿಸಿಲ್ಲ ಎಂದು ಸ್ಪಷ್ಟನೆ ನೀಡದರಲ್ಲದೇ ಗ್ರಾಮಸ್ಥರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡಲು ಸರ್ಕಾರ ನಿರ್ಧಾರ; ಆನ್ಲೈನ್ನಲ್ಲಿ ಟಿಕೆಟ್ ಲಭ್ಯ
ಹೀಗೆ ಹೇಳುತ್ತಿದ್ದಂತೆ ಸಿಡಿದೆದ್ದ ಸ್ಥಳೀಯ ಮಹಿಳೆಯರು ವಾಲ್ ತೋರಿಸಿ ಗ್ರಾಪಂ ಸದಸ್ಯೆ ಮಮತ ಮೇಲೆ ಸಿಡಿದು ಬಿದ್ದರು ಇನ್ನೂ ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಪಿಡಿಓ ಕೋಕಿಲಾ ಅಕ್ರಮ ನೀರಿನ ಸಂಪರ್ಕ ಬಂದ್‌ಗೆ ಪಿಡಿಓ ಸೂಚನೆ ನೀಡುತ್ತಿದ್ದಂತೆ ಗ್ರಾಪಂ ಸದಸ್ಯ ಮತ್ತೆ ಸ್ಥಳೀಯರು ಜಡೆ ಹಿಡಿದು ಪಿಡಿಓ ಮುಂದೆಯೇ ಬಡಿದಾಡಿಕೊಂಡಿದ್ದಾರೆ.ಇನ್ನೂ ಸ್ಥಳದಲ್ಲಿದ್ದ ಪಿಡಿಓ ಚಿಕ್ಕನಾಯಕನಹಳ್ಳಿ ಪೊಲೀಸರನ್ನ ಸ್ಥಳಕ್ಕೆ ಕರೆಸಿ ಎರಡು ಕಡೆಯವರಿಗೆ ಬುದ್ದಿವಾದ ಹೇಳಿ ಪ್ರಕರಣ ತಿಳಿಗೊಳಿಸಿದ್ದಾರೆ.
ಒಟ್ಟಾರೆ ನೀರಿಗಾಗಿ ನಾರಿಯರು ಜಡೆ ಇಡಿದು ಬಡಿದಾಡುವ ಪ್ರಕರಣಗಳ ಕಾಣೆಯಾದ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ನೀರಿಗಾಗಿ ಜಡೆ ಜಗಳ ಪ್ರಕರಣ ದಾಖಲಾಗಿದೆ. ಅದೇನೇ ಇರಲಿ ಅಕ್ರಮವಾಗಿ ನೀರನ್ನ ತೋಟಕ್ಕೆ ಹಾಯಿಸಿಕೊಂಡ ಗ್ರಾಪಂ ಸದಸ್ಯೆ ಮಮತ ಮೇಲೆ ಕ್ರಮವಹಿಸುವ ಜೊತೆಗೆ ದಂಡ ವಿಧಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.