Monday, April 14, 2025

ಕಾಲುವೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂರು ಮಕ್ಕಳು ಸಾ*ವು

ಮೈಸೂರು : ಕಾಲುವೆಯಲ್ಲಿ ಕೈತೊಳೆಯಲು ಹೋಗಿದ್ದ ಮೂರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ನೆನ್ನೆ ಸಂಜೆ 5 ಗಂಟೆಗೆ ವಿಸಿ ನಾಲೆ ಬಳಿ ಘಟನೆ ನಡೆದಿದೆ. ಮೃತ ಮಕ್ಕಳನ್ನು 16 ವರ್ಷದ ಸೋನು, 15 ವರ್ಷದ ಸಾಯಿಸ್ತಾ ಮತ್ತು 10 ವರ್ಷದ ಸಿದ್ದಿಕ್​ ಎಂದು ಗುರುತಿಸಲಾಗಿದೆ.

ಮೈಸೂರಿನ ಹೌಸ್ಯ ನಗರದ ನಿವಾಸಿಗಳಾದ ಮಕ್ಕಳು. ಕೆಆರ್​ಎಸ್​ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ನೆನ್ನೆ ಸಂಜೆ 5 ಗಂಟೆ ವೇಳೆಗೆ ವಿಸಿ ನಾಲೆ ಬಳಿಗೆ ಕೈ ತೊಳೆಯಲು ಎಂದು ಹೋಗಿದ್ದ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ. ಮೃತರ ಪೈಕಿ ಸಾಯಿಸ್ತಾ ಎಂಬ ಬಾಲಕಿ ಇತ್ತೀಚೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದರು.

ಇದನ್ನೂ ಓದಿ :1200 ರೂಪಾಯಿ ಇದ್ದ ಗ್ಯಾಸ್​ ರೇಟ್​ನ್ನ ಮೋದಿ 850ರೂಗೆ ಕಡಿಮೆ ಮಾಡಿದ್ದಾರೆ; ಪ್ರತಾಪ್​ ಸಿಂಹ

ಮೃತದೇಹಗಳನ್ನು ನೀರಿನಿಂದ ಮೇಲೆತ್ತಿ ಶವಗಾರಕ್ಕೆ ರವಾನಿಸಿದ್ದು. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES