ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ನಟ ದರ್ಶನ್ ಗೈರಾಗಿದ್ದು ನಡೆಸಿದ್ದು. ಬೆನ್ನು ನೋವಿನ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಈ ಕುರಿತು ನ್ಯಾಯಾಧೀಶರು ದರ್ಶನ್ ಪರ ವಕೀಲರಿಗೆ ಸೂಚನೆ ನೀಡಿದ್ದು. ವಿಚಾರಣೆಗೆ ತಪ್ಪಿಸಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ ಹಾಗೂ ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ನಿಗದಿ ಪಡಿಸಲಾಗಿದೆ.
57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು. ಪ್ರಕರಣದ ವಿಚಾರಣೆಗೆ ಆರೋಪಿ ದರ್ಶನ್ ಗೈರಾಗಿದ್ದಾರೆ. ಆದರೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ನ್ಯಾಯಾಧೀಶ. ಜೈ ಶಂಕರ್ ಅವರ ಮುಂದೆ ಹಾಜರಾಗಿದ್ದಾರೆ. ಎಲ್ಲಾ ಆರೋಪಿಗಳ ಹೆಸರನ್ನು ಕೂಗಿ ಹಾಜರಾತಿಯನ್ನು ಖಚಿತಪಡಿಸಿಕೊಂಡ ನ್ಯಾಯಾಧೀಶರು. ದರ್ಶನ್ಗೆ ವಿಚಾರಣೆಗೆ ಗೈರಾಗದಂತೆ ದರ್ಶನ್ ಪರ ವಕೀಲರಿಗೆ ಸೂಚನೆ ನೀಡಿದರು.
ಇದನ್ನೂ ಓದಿ:ಸಾಲಭಾದೆ; ಪುಟಾಣಿ ಮಕ್ಕಳಿಬ್ಬರನ್ನು ಅನಾಥವಾಗಿಸಿ ದಂಪತಿ ಆತ್ಮಹ*ತ್ಯೆ
ಜಾಮೀನು ಷರತ್ತು ಸಡಿಲಿಕೆ ಹೈಕೋರ್ಟ್ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು. ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್ಗಳನ್ನು ರಿಲೀಸ್ ಮಾಡುವಂತೆ ಕೆಲ ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲ ಈ ಎಲ್ಲಾ ಅರ್ಜಿಯನ್ನು ಪುರಸ್ಕರಿಸಿದ್ದು. ಮುಂದಿನ ವಿಚಾರಣೆಯನ್ನು ಮೇ.20ಕ್ಕೆ ಮುಂದೂಡಿದೆ.