Sunday, April 13, 2025

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ; ಯಾವ ಜಿಲ್ಲೆಗೆ, ಯಾವ ಸ್ಥಾನ

ಬೆಂಗಳೂರು : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ 73.45% % ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 93.90% ಸಾಧನೆ ಮಾಡುವ ಮೂಲಕ  ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.  ಎರಡನೇ ಸ್ಥಾನ ದಕ್ಷಿಣ ಕನ್ನಡ (93.57%),  ಮೂರನೇ ಸ್ಥಾನವನ್ನು ಬೆಂಗಳೂರು ದಕ್ಷಿಣ(85.36%) ಪಡೆದುಕೊಂಡಿದೆ. ಕೊನೆ ಸ್ಥಾನ ಯಾದಗಿರಿ (73.45%)  ಪಡೆದುಕೊಂಡಿದೆ.

ಇದನ್ನೂ ಓದಿ :ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಉಡುಪಿ ಫಸ್ಟ್​, ಯಾದಗಿರಿ ಲಾಸ್ಟ್​

ಜಿಲ್ಲಾವಾರು ಫಲಿತಾಂಶ…

ಮೊದಲ ಸ್ಥಾನ ಉಡುಪಿ ಜಿಲ್ಲೆ ; 93.90

ಎರಡನೇ ಸ್ಥಾನ ದಕ್ಷಿಣ ಕನ್ನಡ ‌ಜಿಲ್ಲೆ; 93.57

ಮೂರನೇ ಸ್ಥಾನ ಬೆಂಗಳೂರು ದಕ್ಷಿಣ ; 85.36

ನಾಲ್ಕನೇ ಸ್ಥಾನ ಕೊಡಗು; 83.84

ಐದನೇ ಸ್ಥಾನ ಬೆಂಗಳೂರು ಉತ್ತರ; 83.31

ಆರನೇ ಸ್ಥಾನ ಉತ್ತರ ಕನ್ನಡ ‌; 82.93

ಏಳನೇ ಸ್ಥಾನ ಶಿವಮೊಗ್ಗ ; 79.91

ಎಂಟನೇ ಸ್ಥಾನ ಬೆಂಗಳೂರು ಗ್ರಾಮಾಂತರ ; 79.70

ಒಂಭತ್ತನೇ ಸ್ಥಾನ ಚಿಕ್ಕಮಗಳೂರು; 79.56

ಹತ್ತನೇ ಸ್ಥಾನ ಹಾಸನ; 77.56

ಚಿಕ್ಕಬಳ್ಳಾಪುರ ಜಿಲ್ಲೆ 75.80, ಮೈಸೂರು ಜಿಲ್ಲೆ 74.30ರಷ್ಟು ಫಲಿತಾಂಶ, ಚಾಮರಾಜನಗರ ಜಿಲ್ಲೆ 73.97, ಮಂಡ್ಯ ಜಿಲ್ಲೆ 73.27ರಷ್ಟು ಫಲಿತಾಂಶ, ಬಾಗಲಕೋಟೆ ಜಿಲ್ಲೆ 72.83, ಕೋಲಾರ ಜಿಲ್ಲೆ 72.45ರಷ್ಟು ಫಲಿತಾಂಶ, ಧಾರವಾಡ ಜಿಲ್ಲೆ 72.32, ತುಮಕೂರು ಜಿಲ್ಲೆ 72.02ರಷ್ಟು ಫಲಿತಾಂಶ, ರಾಮನಗರ ಜಿಲ್ಲೆ 69.71, ದಾವಣಗೆರೆ ಜಿಲ್ಲೆ 69.45ರಷ್ಟು ಫಲಿತಾಂಶ, ಹಾವೇರಿ ಜಿಲ್ಲೆ 76.56, ಬೀದರ್ ಜಿಲ್ಲೆ 67.31ರಷ್ಟು ಫಲಿತಾಂಶ ಬಂದಿದೆ.

ಕೊಪ್ಪಳ ಜಿಲ್ಲೆ 67.20, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 66.76ರಷ್ಟು ಫಲಿತಾಂಶ, ಗದಗ ಜಿಲ್ಲೆ 66.64, ಬೆಳಗಾವಿ ಜಿಲ್ಲೆ 65.37ರಷ್ಟು ಫಲಿತಾಂಶ, ಬಳ್ಳಾರಿ ಜಿಲ್ಲೆ 64.41, ಚಿತ್ರದುರ್ಗ ಜಿಲ್ಲೆ 59.87ರಷ್ಟು ಫಲಿತಾಂಶ, ವಿಜಯಪುರ ಜಿಲ್ಲೆ 58.81, ರಾಯಚೂರು ಜಿಲ್ಲೆ 58.75ರಷ್ಟು ಫಲಿತಾಂಶ ಕಲಬುರಗಿ ಜಿಲ್ಲೆ 55.70, ಯಾದಗಿರಿ ಜಿಲ್ಲೆ 48.45ರಷ್ಟು ಫಲಿತಾಂಶ ಬಂದಿದೆ.

ವಿಭಾಗವಾರು ಫಲಿತಾಂಶ..!

(01) ಕಲಾ ವಿಭಾಗ

  • ಪರೀಕ್ಷೆಗೆ ಹಾಜರಾದವರು: 1,53,043
  • ಉತ್ತೀರ್ಣರಾದವರು: 81,553
  • ಶೇಕಡಾವಾರು ಉತ್ತೀರ್ಣ: 53.29

(2) ವಾಣಿಜ್ಯ ವಿಭಾಗ

  • ಪರೀಕ್ಷೆಗೆ ಹಾಜರಾದವರು: 2,04,329
  • ಉತ್ತೀರ್ಣರಾದವರು: 1,55,425
  • ಶೇಕಡಾವಾರು ಉತ್ತೀರ್ಣ: 76.07

(03) ವಿಜ್ಞಾನ ವಿಭಾಗ

  • ಪರೀಕ್ಷೆಗೆ ಹಾಜರಾದವರು; 2,80,433
  • ಉತ್ತೀರ್ಣರಾದವರು; 2,31,461
  • ಶೇಕಡವಾರು ಉತ್ತೀರ್ಣ; 82.54

ಒಟ್ಟು 134 ಕಾಲೇಜುಗಳಿಗೆ ಶೇಕಡಾ 100ರಷ್ಟು ಫಲಿತಾಂಶ ದೊರೆತಿದ್ದು. ಇದರಲ್ಲಿ 13 ಸರ್ಕಾರಿ ಕಾಲೇಜುಗಳು 100 ಫಲಿತಾಂಶ ದೊರೆತಿದೆ. ಇನ್ನು 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

 

RELATED ARTICLES

Related Articles

TRENDING ARTICLES